ಜಪಾನ್ ಜೊತೆ ನೌಕಾ ಸಮರಾಭ್ಯಾಸಕ್ಕೆ ಸಜ್ಜಾದ ಭಾರತ!

0
153
Tap to know MORE!

ಜಪಾನ್ ಜೊತೆ ನೌಕಾ ಸಮರಾಭ್ಯಾಸಕ್ಕೆ ಭಾರತ ಸಜ್ಜಾಗಿದ್ದು, ಇಂದಿನಿಂದ ಮೂರು ದಿನಗಳ ಕಾಲ ಭಾರತ-ಜಪಾನ್ ನೌಕಾಸೇನೆ ಸಮಾರಾಭ್ಯಾಸ ನಡೆಸಲಿವೆ.

ಭಾರತ-ಆಸ್ಟ್ರೇಲಿಯಾ ನಡುವಿನ ಎರಡು ದಿನಗಳ ಜಂಟಿ ನೌಕಾ ಸಮರಾಭ್ಯಾಸಕ್ಕೆ ನಿನ್ನೆ ಅಧಿಕೃತವಾಗಿ ತೆರೆಬಿದ್ದಿತ್ತು. ಪೂರ್ವ ಹಿಂದೂ ಮಹಾಸಾಗರದಲ್ಲಿ ಎರಡೂ ದೇಶಗಳ ನೌಕಾಸೇನೆ ಯಶಸ್ವಿಯಾಗಿ ಸಮರಾಭ್ಯಾಸವನ್ನು ಪೂರ್ಣಗೊಳಿಸಿವೆ.

ಈ ಕುರಿತು ಮಾಹಿತಿ ನೀಡಿರುವ ಭಾರತೀಯ ನೌಕಾಸೇನೆ, ಭಾರತ-ಜಪಾನ್ ನಡುವಿನ 4ನೇ ಕಡಲ ದ್ವಿಪಕ್ಷೀಯ ವ್ಯಾಯಾಮ (JIMEX)ಗೆ ಚಾಲನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ. ದ್ವೈವಾರ್ಷಿಕವಾಗಿ ನಡೆಯುವ JIMEXಗೆ ನಾಳೆ(ಶನಿವಾರ)ಯಿಂದ ಅಧಿಕೃತ ಚಾಲನೆ ದೊರೆಯಲಿದ್ದು, ಇದಕ್ಕಾಗಿ ಭಾರತ-ಜಪಾನ್ ನೌಕಾ ಯುದ್ಧ ಹಡಗುಗಳು ಸಂಪೂರ್ಣವಾಗಿ ಸಜ್ಜಾಗಿವೆ.

LEAVE A REPLY

Please enter your comment!
Please enter your name here