ಜಮೀರ್ ಅನೈತಿಕ ಚಟುವಟಿಕೆಯಿಂದಲೇ ಉನ್ನತ ಸ್ಥಾನಕ್ಕೆ ಬಂದ ವ್ಯಕ್ತಿ ಎಂದ ರೇಣುಕಾಚಾರ್ಯ, ಡ್ರಗ್ಸ್ ವಿಚಾರದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ನಮ್ಮ ಸರಕಾರ ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶ ನೀಡಿದೆ. ಡ್ರಗ್ಸ್ ವಿಚಾರದಲ್ಲಿ ಸತ್ಯಾಂಶ ಹೊರ ಬರಲಿದೆ ಎಂದರು.
ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಮೀರ್ ಅಹ್ಮದ್ ಈ ಹಿಂದೆ ಯಡಿಯೂರಪ್ಪ ಸಿಎಂ ಆದ್ರೆ ಅವರ ಮನೆ ವಾಚ್ ಮನ್ ಆಗುವುದಾಗಿ ಹೇಳಿದ್ದರು. ಆದ್ರೆ ಯಡಿಯೂರಪ್ಪ ಸಿಎಂ ಅಗಿದ್ದಾರೆ. ಆದರೆ ಜಮೀರ್ ಅವರು ವಾಚ್ಮನ್ ಆಗಲಿಲ್ಲ. ಅವರು ಒಂದು ರೀತಿ ಎರಡು ನಾಲಿಗೆ ವ್ಯಕ್ತಿ,” ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಜಮೀರ್ ಅಹ್ಮದ್ ಖಾನ್ ಚಿಲ್ಲರೇ ಗಿರಾಕಿ, ಗುಜರಿ ಗಿರಾಕಿ. ಆತ ಏನೇ ಸಂಪಾದಿಸಿದ್ದರೂ ಅದು ಅನೈತಿಕ ಚಟುವಟಿಕೆಗಳಿಂದ ಎಂದು ಮಾಜಿ ಸಚಿವ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದ್ದಾರೆ.