“ನನ್ನ ಆಸ್ತಿಯನ್ನು ಸರ್ಕಾರಕ್ಕೆ ಬರೆದು ಕೊಡುವೆ” – ಶಾಸಕ ಜಮೀರ್ ಹೊಸ ಚಾಲೆಂಜ್!

0
241
Tap to know MORE!

ಬೆಂಗಳೂರು ಸೆ.11: ಸ್ಯಾಂಡಲ್‌ವುಡ್‌ ಡ್ರಗ್‌ ದಂಧೆ ಪ್ರಕರಣದ ಹಿನ್ನೆಲೆಯಲ್ಲಿ ನನ್ನ ಮೇಲೆ ಹೊರಿಸಲಾಗುತ್ತಿರುವ ಆರೋಪಗಳ ಬಗ್ಗೆ ಮುಖ್ಯಮಂತ್ರಿಯವರ ನೇತೃತ್ವದಲ್ಲೇ ತನಿಖೆ ನಡೆಯಲಿ. ಸಾಬೀತಾದರೆ ನನ್ನ ಸಮಸ್ತ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದು ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಸವಾಲು ಹಾಕಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಂಜನಾ ಜೊತೆ ಹೋಗಿದ್ದೆ ಎಂಬ ಸಂಬರಗಿ ಆರೋಪ ಶುದ್ಧ ಸುಳ್ಳು. ಈ ಬಗ್ಗೆ ನನ್ನನ್ನು ತನಿಖೆಗೆ ಒಳಪಡಿಸಲು ನನ್ನ ಯಾವುದೇ ಆಕ್ಷೇಪ ಇಲ್ಲ. ನನ್ನ ವಿಮಾನ ಪ್ರಮಾಣದ ದಾಖಲೆಗಳನ್ನು ಪರಿಶೀಲಿಸಲಿ. ಯಾವುದೇ ರೀತಿಯ ತನಿಖೆಯನ್ನು ಬೇಕಾದರೂ ಮಾಡಲಿ ನಾನು ಸಿದ್ಧನಿದ್ದೇನೆ ಎಂದರು.

“ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲೇ ತನಿಖೆ ನಡೆಯಲಿ. ಆರೋಪ ಸಾಬೀತಾದರೆ ನನ್ನ ಎಲ್ಲ ಆಸ್ತಿ ಸರ್ಕಾರಕ್ಕೆ ಬರೆಯುತ್ತೇನೆ. ಆರೋಪ ಸುಳ್ಳಾದರೆ ಸಂಬರಗಿಯಗೆ ಏನು ಮಾಡಲಾಗುವುದು ಎಂಬುದನ್ನು ಸರ್ಕಾರ ತಿಳಿಸಬೇಕು” ಎಂದರು.

LEAVE A REPLY

Please enter your comment!
Please enter your name here