ಜಮ್ಮು ಕಾಶ್ಮೀರದ ಕ್ರಿಕೆಟ್‌ಗೆ ಉತ್ತೇಜನ ನೀಡುವಂತೆ ಪ್ರಸ್ತಾಪಿಸಿದ ಸುರೇಶ್ ರೈನಾ

0
198
Tap to know MORE!

ಜಮ್ಮು ಮತ್ತು ಕಾಶ್ಮೀರದ ಗ್ರಾಮೀಣ ಭಾಗದಲ್ಲಿ ಕ್ರಿಕೆಟ್‌ನ ಪ್ರಚಾರಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಒಂದು ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.

ಇತ್ತೀಚೆಗೆ ಎಲ್ಲಾ ರೀತಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಎಡಗೈ ಬ್ಯಾಟ್ಸ್‌ಮನ್ ರೈನಾ, ಜಮ್ಮು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್‌ಬಾಗ್ ಸಿಂಗ್ ಮತ್ತು ಅನಂತ್‌ನಾಗ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

“ಕ್ರಿಕೆಟ್ ಪ್ರಾರಂಭಿಸಲು ಮತ್ತು ಉತ್ತೇಜಿಸುವ ಹೆಚ್ಚಿನ ಭರವಸೆ ಮತ್ತು ನಿರೀಕ್ಷೆಯೊಂದಿಗೆ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದ ಬಡ ಮಕ್ಕಳಿಗೆ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಅವಕಾಶವಿದೆ” ಎಂದು ಪತ್ರದಲ್ಲಿ ಬರೆದಿದ್ದಾರೆ

33 ವರ್ಷದ ಕ್ರಿಕೆಟಿಗ, ಗ್ರಾಮೀಣ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಕ್ರೀಡೆಯನ್ನು ಉತ್ತೇಜಿಸಲು ಬಯಸಿದ್ದಾರೆ ಮತ್ತು ಜಮ್ಮು ಕಾಶ್ಮೀರದಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಹುಡುಕುವುದು ಅವರ ಉದ್ದೇಶವಾಗಿದೆ ಎಂದು ಪತ್ರದಲ್ಲಿ ಹೇಳಿದರು.

ಐಪಿಎಲ್ 2020 ಗಾಗಿ ಈಗ ಯುಎಇಯಲ್ಲಿರುವ ರೈನಾ, ಪತ್ರದಲ್ಲಿ, “ಕ್ರಿಕೆಟ್ ಕೇವಲ ಒಂದು ಕ್ರೀಡೆಯಲ್ಲ. ಆದರೆ ಇದು ವೃತ್ತಿಪರ ನೀತಿಗಳನ್ನು ಹೊಂದಿರುವ, ವ್ಯಕ್ತಿಗಳ ಗುಂಪನ್ನು ರೂಪಿಸುವ ಒಂದು ಪ್ರಕ್ರಿಯೆಯನ್ನು ವಿಕಸನಗೊಳಿಸುತ್ತದೆ. ಅವರ ಮುಂದಿನ ಜೀವನದಲ್ಲಿ ಶಿಸ್ತು ಮತ್ತಷ್ಟು ಬೆಳೆಯುತ್ತದೆ. ಪ್ರತಿಯೊಬ್ಬರೂ ಮಾನಸಿಕವಾಗಿ, ದೈಹಿಕವಾಗಿ, ಸದೃಢವಾಗಿ ಮತ್ತು ಆರೋಗ್ಯವಾಗಿರಬೇಕು. ಮಗು ಯಾವುದೇ ಕ್ರೀಡಾ ಚಟುವಟಿಕೆಗಳಿಗೆ ತರಬೇತಿಯನ್ನು ಪಡೆದಾಗ ಅವನು ಅಥವಾ ಅವಳು ಸ್ವಯಂಚಾಲಿತವಾಗಿ ಶಿಸ್ತಿನ ಜೀವನಶೈಲಿಗೆ ಹೊಂದಿಕೊಳ್ಳುತ್ತಾರೆ ಮತ್ತು ದೈಹಿಕ ಸಾಮರ್ಥ್ಯದ ಮಹತ್ವದ ಬಗ್ಗೆ ತಿಳಿದಿರುತ್ತಾರೆ. ಮುಂದೆ ಇವರು ನಮ್ಮ ರಾಷ್ಟ್ರದ ಭವಿಷ್ಯವಾಗಬಹುದು” ಎಂದಿದ್ದಾರೆ.

ಅವರ ತಂದೆ ತ್ರಿಲೋಕ್ ಚಂದ್ ಕಾಶ್ಮೀರದ ರೈನಾವರಿ ಪ್ರದೇಶದವರಾಗಿರುವುದರಿಂದ ರೈನಾ ಅವರಿಗೆ ಜಮ್ಮು ಕಾಶ್ಮೀರದ ಜೊತೆ ಆಳವಾದ ಸಂಪರ್ಕವಿದೆ. ಅವರ ತಾಯಿ ಹಿಮಾಚಲ ಪ್ರದೇಶದ ಧರ್ಮಶಾಲಾ ಮೂಲದವರು. ಆದರೆ, ಅವರ ಕುಟುಂಬ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನೆಲೆಸಿದೆ.

LEAVE A REPLY

Please enter your comment!
Please enter your name here