ಮುಂದಿನ ವರ್ಷ ದ್ವಿತೀಯಾರ್ಧದಲ್ಲಿ ಬರಲಿದೆ ಜಿಯೋ 5G!

0
161
Tap to know MORE!

ಮುಂಬೈ(ಡಿ. 08): ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಕೇಂದ್ರದ ಡಿಜಿಟಲ್ ಇಂಡಿಯಾ ಯೋಜನೆಯನ್ನು ಶ್ಲಾಘಿಸಿದ್ದಾರೆ. 2020ರ ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅಂಬಾನಿ, ಕೋವಿಡ್ ಸಂಕಷ್ಟದಲ್ಲೂ ಆನ್​ಲೈನ್​ನಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಭಾರತದ ಪ್ರಬಲ ಡಿಜಿಟಲ್ ತಂತ್ರಜ್ಞಾನ ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಹಾಗೆಯೇ, ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಜಿಯೋ 5G ನೆಟ್​ವರ್ಕ್ ಅಳವಡಿಕೆಗೆ ಸಜ್ಜಾಗಿರುವುದನ್ನೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಇವತ್ತು ಡಿಜಿಟಲ್ ತಂತ್ರಜ್ಞಾನದಲ್ಲಿ ಭಾರತದ ಎರಡು ಶಕ್ತಿಯನ್ನು ಈ ವಿಶ್ವ ಗುರುತಿಸಿದೆ. ಮೊದಲನೆಯದು ಭಾರತದ ಕ್ರಿಯಾಶೀಲ ಪ್ರಜಾತಾಂತ್ರಿಕತೆ, ಯುವ ಸಮುದಾಯ ಮತ್ತು ಡಿಜಿಟಲ್ ಪರಿವರ್ತನೆ. ಮತ್ತೊಂದು ಶಕ್ತಿ ಎಂದರೆ ನರೇಂದ್ರ ಮೋದಿ ಅವರ ನಾಯಕತ್ವ. ಇವರ ಡಿಜಿಟಲ್ ಇಂಡಿಯಾ ಮಿಷನ್ ನಮ್ಮ ದೇಶವನ್ನ ಸಂಕಷ್ಟ ಕಾಲದಲ್ಲೂ ಕೈಹಿಡಿದು ಕಾಪಾಡಿದೆ. 2020ರ ಇಡೀ ವರ್ಷ ಭಾರತ ಆನ್​ಲೈನ್​ನಲ್ಲೇ ಕೆಲಸ ಮಾಡಿದೆ, ವಿದ್ಯಾಭ್ಯಾಸ ಮಾಡಿದೆ, ವ್ಯಾಪಾರ ಮಾಡಿದೆ, ಆರೋಗ್ಯಸೇವೆ ಪಡೆದಿದೆ, ಕ್ರೀಡೆಯನ್ನೂ ಆಡಿದೆ. ಇದು ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನದ ಅಭೂತಪೂರ್ವ ಬೆಳವಣಿಗೆಗೆ ಕೈಗನ್ನಡಿಯಾಗಿದೆ ಎಂದು ಮುಕೇಶ್ ಅಂಬಾನಿ ಹೇಳಿದರು.

ಇದನ್ನೂ ಓದಿ: ₹5,000 ಕ್ಕೂ ಕಡಿಮೆ ಬೆಲೆಯಲ್ಲಿ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಜಿಯೋ ಚಿಂತನೆ

ಕೆಲವೇ ಕೆಲಸಗಳು ಮತ್ತು ಮನರಂಜನೆಗಳಿಗೆ ಸೀಮಿತವಾಗಿದ್ದ ಭಾರತದ ಡಿಜಿಟಲ್ ಕ್ಷೇತ್ರ ಇದೀಗ ಅಸೀಮ ಸಬಲೀಕರಣಕ್ಕೆ ವೇದಿಕೆಯಾಗಿ ಬೆಳೆದಿದೆ. ಲಾಕ್ ಡೌನ್ ವೇಳೆಯಲ್ಲೂ ಡಿಜಿಟಲ್ ಕ್ಷೇತ್ರದ ಸಾವಿರಾರು ಎಂಜಿನಿಯರ್​ಗಳು ಮತ್ತು ನೌಕರರು ದಿನದ 24 ಗಂಟೆ ಕೆಲಸ ಮಾಡಿ ಸಮಾಜದ ಎಲ್ಲಾ ವರ್ಗಗಳಿಗೂ ನೆರವು ಒದಗಿಸಿದ್ದಾರೆ. ಕೇಂದ್ರ ಸರ್ಕಾರ ಕೂಡ ಹೆಚ್ಚಿನ ಮುತುವರ್ಜಿ ವಹಿಸಿ ಈ ಕ್ಷೇತ್ರದ ಬಲ ಹೆಚ್ಚಿಸಿದ್ದಾರೆ. ಇದು ಶ್ಲಾಘನೀಯ. ಪ್ರಧಾನಿ ಅವರ ನಾಯಕತ್ವದಲ್ಲಿ ಭಾರತ ಹೊಸ ಆತ್ಮವಿಶ್ವಾಸಲ್ಲಿ ಹೊಸ ದಶಕವನ್ನು ಎದುರುಗೊಳ್ಳಲಿದೆ. ಭಾರತದ ಆರ್ಥಿಕತೆ ಪುನಶ್ಚೇತನಗೊಳ್ಳುವುದಷ್ಟೇ ಅಲ್ಲ ಹೊಸ ವೇಗದಲ್ಲಿ ಬೆಳವಣಿಗೆ ಸಾಧಿಸುತ್ತದೆ. ಅಂದುಕೊಂಡಂತೆ 5 ಟ್ರಿಲಿಯನ್ ಡಾಲರ್​ನ ಆರ್ಥಿಕತೆ ಸಾಧ್ಯವಾಗುತ್ತದೆ ಎಂದು ಆರ್​ಐಎಲ್ ಚೇರ್​ಮನ್ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here