ಜಿ ಎಸ್ ಟಿ ರಿಟರ್ನ್ಸ್ ವಿಳಂಬ, ಉದ್ಯಮಗಳಿಗೆ ವಿನಾಯಿತಿ

0
190
Tap to know MORE!

ಹೊಸದಿಲ್ಲಿ: ಕಳೆದ ಮೂರು ವರ್ಷಗಳಿಂದ ಜಿ ಎಸ್ ಟಿ ಪಾವತಿಸದ ಉದ್ಯಮಗಳಿಗೆ ಕೇಂದ್ರ ಸರಕಾರ ವಿನಾಯಿತಿ ನೀಡಿದೆ.
2017ರ ಜುಲೈಯಿಂದ 2020ರ ಜನವರಿ ವರೆಗಿನ ಅವಧಿಯಲ್ಲಿ ಜಿ ಎಸ್ ಟಿ ರಿಟರ್ನ್ಸ್ ಸಲ್ಲಿಸದವರು ಇದೇ ಜು. 1 ರಿಂದ ಆ. 30ರ ವರೆಗೆ ಸಲ್ಲಿಸಬಹುದು. ಇವರಿಗೆ ವಿಳಂಬ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಬಾಕಿ ತೆರಿಗೆ ಬಡ್ಡಿಯನ್ನೂ ಮನ್ನಾ ಮಾಡಲಾಗುವುದೆಂದು ಘೋಷಿಸಿದ್ದಾರೆ. ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆದ ಜಿ ಎಸ್ ಟಿ ಮಂಡಳಿಯ 40ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಜಿ ಎಸ್ ಟಿ ಏರಿಕೆ ಪ್ರಸ್ತಾವವನ್ನು ಮುಂದೂಡಲಾಗಿದೆ.

2017ರ ಜುಲೈಯಿಂದ 2020ರ ಜನವರಿಯ ವರೆಗೆ ರಿಟರ್ನ್ಸ್ ಸಲ್ಲಿಸದವರಿಗೆ ದಂಡದಿಂದ ವಿನಾಯಿತಿ ಸಿಗಲಿದೆ. ‘ಜಿ ಎಸ್ ಟಿ ಆರ್ – 3ಬಿ’ ಮೂಲಕ ರಿಟರ್ನ್ಸ್ ಸಲ್ಲಿಸದವರಿಗೆ ವಿಧಿಸಲಾಗುವ ದಂಡವನ್ನು ಗರಿಷ್ಠ 500ರೂ. ಗೆ ಮಿತಗೊಳಿಸಲಾಗಿದೆ.
ತೆರಿಗೆ ಸಲ್ಲಿಸದಿರುವ ವಾರ್ಷಿಕ 5 ಕೋಟಿ ರೂ ವಹಿವಾಟಿನ ಕಂಪೆನಿಗಳಿಗೂ ಹೊಸ ಅವಕಾಶ ಕಲ್ಪಿಸಲಾಗಿದೆ. ಫೆಬ್ರವರಿ, ಮಾರ್ಚ್, ಏಪ್ರಿಲ್ ರಿಟರ್ನ್ಸ್ ಸಲ್ಲಿಸದ ಇಂತಹ ಕಂಪೆನಿಗಳು ಸೆ. 30ರ ಒಳಗೆ ಸಲ್ಲಿಸಿದರೆ ಲೇಟ್ ರಿಟರ್ನ್ಸ್ ದಂಡವನ್ನು ಶೇ. 18 ರಿಂದ ಶೇ. 9ಕ್ಕೆ ಇಳಿಸಲಾಗಿದೆ. ಜು.31ರ ವರೆಗೆ ರದ್ದಾಗಿದ್ದ ಜಿ.ಎಸ್.ಟಿ ನೋಂದಣಿ ರೆಸ್ಟೋರೇಷನ್ ಗೆ ಮರುಚಾಲನೆ ನೀಡಲಾಗಿದ್ದು ಅರ್ಜಿ ಸಲ್ಲಿಕೆಗೆ ಸೆ. 30ರ ವರೆಗೆ ಅವಕಾಶ ಇದೆ.

LEAVE A REPLY

Please enter your comment!
Please enter your name here