ತೋಕೂರು : ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರ

0
238
Tap to know MORE!

ತೋಕೂರು ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ, ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮತ್ತು ಹೆಣ್ಣು ಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನ ಯೋಜನೆಯ ಆಶ್ರಯದಲ್ಲಿ ಜೀವನ ಕೌಶಲ್ಯ ತರಬೇತಿ ಮಾಹಿತಿ ಕಾರ್ಯಾಗಾರವು ಭಾನುವಾರ ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪಾಂಪೆ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ! ಕ್ಲಾರೆನ್ಸ್ ಮಿರಾಂದ ಮಾತನಾಡಿ, ಜೀವನ ಕೌಶಲ್ಯವನ್ನು ಕಲಿಸುವಂತಹ ಪ್ರಕ್ರಿಯೆ ಶಾಲೆಯಲ್ಲೂ ಆಗಬೇಕು ಮತ್ತು ಮನೆಯಲ್ಲೂ ಆಗಬೇಕು. ಮಕ್ಕಳಿಗೆ ಜೀವನ ಕೌಶಲ್ಯವನ್ನು ಕಲಿಸುವಂತಹ ಕುಶಲಿಗಳು ಕುಟುಂಬದ ಸದಸ್ಯರು, ಶಾಲೆಯ ಯಾವುದೇ ಸಿಬ್ಬಂದಿ,ಮನೆಗೆ ಬರುವ ಯಾರೇ ಅತಿಥಿಗಳು; ಹೀಗೆ ಯಾರಾದರೂ ಆಗಿರಬಹುದು ಮತ್ತು ಆಗಿರಬೇಕು. ಆದರೆ ನಮ್ಮ ಮಕ್ಕಳಿಗೆ ಅವರಿವರು ಕಲಿಸಲಿ ಎಂಬ ಧೋರಣೆಗಿಂತ ನಾವೇ ಕಲಿಸುವಲ್ಲಿ ಹೆಚ್ಚಿನ ಗಮನ ನೀಡಬೇಕು. ಕನಿಷ್ಠ ಪಕ್ಷ ಅವರಿವರು ಕಲಿಸುತ್ತಿರುವಾಗ ಮಗು ಏನನ್ನು ಕಲಿಯುತ್ತಿದೆ ಎಂಬುದನ್ನಾದರೂ ಗಮನಿಸುವಂತಹ ವ್ಯವಧಾನ ಇರಲೇಬೇಕು” ಎಂದರು.

ತೋಕೂರು : ಗೋಡೆಬರಹದ ಮೂಲಕ ಪರಿಸರ ಜಾಗೃತಿ

“ಜೀವನ ಕೌಶಲ್ಯವನ್ನು ಮಕ್ಕಳಿಗೆ ಕಲಿಸಬೇಕು ಎಂದ ಕೂಡಲೇ ನಾವು ಪೋಷಕರೇ ಆಗಿರಲಿ, ಶಿಕ್ಷಕರೇ ಆಗಿರಲಿ ಮೊದಲು ನಾವು ಕುಶಲಿಗಳಾಗಬೇಕು. ಅದಕ್ಕೆ ನಮ್ಮನ್ನು ನಾವು ಸಿದ್ಧ ಪಡಿಸಿಕೊಳ್ಳುವುದಕ್ಕೆ ಮಹತ್ವದ ಅಂಶಗಳನ್ನು ತಿಳಿಸಿ ಹೇಳಿದರು.”
1.ಆಲೋಚನಾ ಸಾಮರ್ಥ್ಯ ಮತ್ತು ಸಾಮಾಜಿಕ ಕೌಶಲ್ಯ
2.ಸ್ವ ತಿಳುವಳಿಕೆ
3.ಪರನೂಭೂತಿ
4.ವಿಮರ್ಶಾತ್ಮಕ ಆಲೋಚನೆ
5.ನಿರ್ಣಯ ತೆಗೆದು ಕೊಳ್ಳುವ ಕೌಶಲ್ಯ
6.ಸಮಸ್ಯೆ ಪರಿಹರಿಸುವ ಕೌಶಲ್ಯ
7.ಮಾತನಾಡುವ ಕೌಶಲ್ಯ
8.ಒತ್ತಡ ನಿಭಾಯಿಸವುದು
9.ಭಾವನೆಗಳನ್ನು ನಿರ್ವಹಿಸುವ ಕಲೆಯ

ವೇದಿಕೆಯಲ್ಲಿ ಪ್ರಜ್ಞಾ ಸಲಹಾ ಕೇಂದ್ರದ ವಲಯ ಸಂಯೋಜಕರು ಶ್ರೀ ಪ್ರದೀಪ್ ಕಾಮತ್, ಸಂಸ್ಥೆಯ ನಿಕಟ ಪೂರ್ವ ಕಾರ್ಯಾಧ್ಯಕ್ಷರು ಶ್ರೀ ಯೋಗೀಶ್ ಕೋಟ್ಯಾನ್, ಸಂಸ್ಥೆಯ ಅಧ್ಯಕ್ಷರು ಸಂತೋಷ್ ದೇವಾಡಿಗ ಉಪಸ್ಥಿತರಿದ್ದರು

ಸಂಸ್ಥೆಯ ಅಧ್ಯಕ್ಷರು ಶ್ರೀ ಸಂತೋಷ್ ದೇವಾಡಿಗ ಅವರು ಸ್ವಾಗತಿಸಿದರು. ಪ್ರಜ್ಞಾ ಸಲಹಾ ಕೇಂದ್ರದ ಸಿಬ್ಬಂದಿ ಮೇವಿಸ್ ಡಿಸೋಜ ವಂದಿಸಿದರು. ಸಂಸ್ಥೆಯ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಪ್ರಶಾಂತ್ ಕುಮಾರ್ ಬೇಕಲ್ ಕಾರ್ಯಕ್ರಮ ನಿರೂಪಿಸಿದರು.

ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು,ಮಹಿಳಾ ಸದಸ್ಯೆಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here