ಜುಲೈ ಅಂತ್ಯದೊಳಗೆ ‘ಒಂದು ದೇಶ, ಒಂದು ಪಡಿತರ ಚೀಟಿ’ ದೇಶಾದ್ಯಂತ ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಆದೇಶ

0
215
Tap to know MORE!

ದೆಹಲಿ: ಅಸಂಘಟಿತ ವಲಯದ ಕಾರ್ಮಿಕರ ನೋಂದಣಿಗೆ ರಾಷ್ಟ್ರೀಯ ಪೋರ್ಟಲ್ ರಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವೊಚ್ಛ ನ್ಯಾಯಾಲಯ ಮಹತ್ತರ ಆದೇಶ ನೀಡಿದೆ. ಜುಲೈ 31ರ ಒಳಗೆ ಕೇಂದ್ರ ಸರ್ಕಾರ ಪೋರ್ಟಲ್ ಸಿದ್ಧಪಡಿಸಲು ಕ್ರಮ ಕೈಗೊಳ್ಳಬೇಕು. ಅಸಂಘಟಿತ ವಲಯದ ಕಾರ್ಮಿಕರ ನೋಂದಣಿ ಪ್ರಕ್ರಿಯೆಗೆ ರಾಷ್ಟ್ರೀಯ ಪೋರ್ಟಲ್ ಮಾಡಬೇಕು. ಜುಲೈ 31 ರ ಒಳಗೆ ಎಲ್ಲಾ ರಾಜ್ಯಗಳು ಒಂದು ರಾಷ್ಟ್ರ, ಒಂದು ಪಡಿತರ ಚೀಟಿ (ಒನ್ ನೇಷನ್, ಒನ್ ರೇಷನ್ ಕಾರ್ಡ್) ಯೋಜನೆ ಜಾರಿಗೊಳಿಸಬೇಕು ಎಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.

ರಾಜ್ಯದಲ್ಲಿ ಜುಲೈ 6 ರಿಂದ ಹಂತಹಂತವಾಗಿ ದೇಗುಲಗಳು ಓಪನ್ : ಸಚಿವ ಪೂಜಾರಿ

ವಲಸೆ ಕಾರ್ಮಿಕರ ಬಗ್ಗೆ ಸುಪ್ರೀಂಕೋರ್ಟ್​ ನೀಡಿರುವ ಆದೇಶ ಇದಾಗಿದ್ದು, ಆದೇಶದನ್ವಯ ಜುಲೈ 31 ರ ಒಳಗೆ ಎಲ್ಲಾ ರಾಜ್ಯಗಳಲ್ಲಿ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಕಡ್ಡಾಯವಾಗಿ ಜಾರಿಯಾಗಬೇಕಿದೆ. ಆ ಮೂಲಕ ಪಡಿತರ ಚೀಟಿ ಇಲ್ಲದವರಿಗೆ ಆಹಾರ ಧಾನ್ಯ ವಿತರಿಸಲು ರಾಜ್ಯಗಳು ಯೋಜನೆ ರೂಪಿಸಬೇಕು ಎಂದು ತಿಳಿಸಲಾಗಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಅಲ್ಲದೇ, ಇದಕ್ಕೆ ಕೇಂದ್ರ ಸರ್ಕಾರ ಆಹಾರ ಧಾನ್ಯ ಹಂಚಿಕೆ ಮಾಡಬೇಕು ಎನ್ನುವುದನ್ನೂ ಸೂಚಿಸಲಾಗಿದೆ. ಇನ್ನು ಸಮುದಾಯ ಕಿಚನ್ ಸೌಲಭ್ಯದ ಬಗ್ಗೆ ಅಭಿಪ್ರಾಯ ತಿಳಿಸಿರುವ ಸರ್ವೋಚ್ಛ ನ್ಯಾಯಾಲಯ ಕೊರೊನಾ ಇರುವವರೆಗೂ ಸಮುದಾಯ ಕಿಚನ್ ಸೌಲಭ್ಯ ಮುಂದುವರಿಸಬೇಕು ಎಂಬ ಆದೇಶ ನೀಡಿದೆ.

LEAVE A REPLY

Please enter your comment!
Please enter your name here