ಜುಲೈ 31ರವರೆಗೆ ಪಿಲಿಕುಳ ಬಂದ್!

0
64

ಮಂಗಳೂರು : ಕಳೆದ ಕೆಲವಾರು ದಿನಗಳಿಂದ ವೈದ್ಯರು , ಆಶಾ ಕಾರ್ಯಕರ್ತೆಯರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ, ಜನರಲ್ಲೂ ಭೀತಿ ಹೆಚ್ಚುತ್ತಿದೆ. ಇದೇ ವೇಳೆ, ಜಿಲ್ಲೆಯ ಪಿಲಿಕುಳ ನಿಸರ್ಗಧಾಮವನ್ನೂ ಮುಂದಿನ ನಾಲ್ಕು ವಾರಗಳ ಕಾಲ ಬಂದ್ ಮಾಡುವುದಾಗಿ ಪಿಲಿಕುಳದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಕೊರೋನಾ ಸೋಂಕಿನ ಭೀತಿ ಮತ್ತು ಮಳೆಗಾಲವೂ ಆಗಿರುವುದರಿಂದ ನಿಸರ್ಗಧಾಮವನ್ನು ಬಂದ್ ಮಾಡಲು ನಿರ್ಧರಿಸಿದ್ದು, ಜುಲೈ 4 ರಿಂದ 31 ರವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here