ಭಾರತದಾದ್ಯಂತ ಶಾಲೆಗಳು, ಕಾಲೇಜುಗಳು ಮತ್ತುಎಲ್ಲಾ ಶಿಕ್ಷಣ ಸಂಸ್ಥೆಗಳು ಜುಲೈ 31 ರವರೆಗೆ ತೆರೆಯುವಂತಿಲ್ಲ ಎಂದು ಗೃಹ ಸಚಿವಾಲಯವು ಸೋಮವಾರ ಹೊಸ ಮಾರ್ಗಸೂಚಿಗಳಲ್ಲಿ ತಿಳಿಸಿದೆ.
“ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳು ಜುಲೈ 31, 2020 ರವರೆಗೆ ಮುಚ್ಚಲ್ಪಡುತ್ತವೆ. ಆನ್ಲೈನ್ / ದೂರ ಶಿಕ್ಷಣಕ್ಕೆ ನೀಡಿದ ಅನುಮತಿಯನ್ನು ಮುಂದುವರಿಸಲಾಗುವುದು ಮತ್ತು ಪ್ರೋತ್ಸಾಹಿಸಲಾಗುವುದು” ಎಂದು ಗೃಹ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಗಸೂಚಿಗಳ ಪ್ರಕಾರ, ಜುಲೈ 31 ರವರೆಗೆ ಕಂಟೈನ್ಮೆಂಟ್ ವಲಯಗಳಲ್ಲಿ ಲಾಕ್ಡೌನ್ ಮುಂದುವರಿಯುತ್ತದೆ ಮತ್ತು ಕೆಲವು ನಿಷೇಧಿತ ಚಟುವಟಿಕೆಗಳನ್ನು ಹೊರತುಪಡಿಸಿ ಎಲ್ಲಾ ಚಟುವಟಿಕೆಗಳನ್ನು ಕಂಟೈನ್ಮೆಂಟ್ ವಲಯಗಳ ಹೊರಗೆ ಮುಂದುವರಿಸಲು ಅನುಮತಿಸಲಾಗುತ್ತದೆ.
ಅದಲ್ಲದೆ ಮೇ 30 ರಂದು ಹೊರಡಿಸಲಾದ ಹಳೆಯ ಮಾರ್ಗಸೂಚಿಗಳು ಜೂನ್ 30 ರವರೆಗೆ ಜಾರಿಯಲ್ಲಿರುತ್ತವೆ.