ಜುಲೈ 4ಕ್ಕೆ ಪಾಸ್ ಕೊನೆ? ಕಾಸರಗೋಡು – ಮಂಗಳೂರು ಸಂಚಾರಕ್ಕೆ ಮತ್ತೆ ಬ್ರೇಕ್ ?

0
59

ಮಂಗಳೂರು: ಕಾಸರಗೋಡು – ಮಂಗಳೂರು ಸಂಚರಿಸುವ ಮಂದಿಗೆ ಕರ್ನಾಟಕ ಸರಕಾರ ಶಾಕ್ ನೀಡಿದೆ. ತಲಪಾಡಿ ಚೆಕ್ ಪೋಸ್ಟ್ ನಲ್ಲಿ ನೀಡುತ್ತಿದ್ದ ಪಾಸ್ ಅವಧಿಯನ್ನು ಜುಲೈ 4ರ ವರೆಗೆ ವಿಸ್ತರಿಸಿದ್ದು ಆನಂತರ ಪಾಸ್ ವ್ಯಾಲಿಡಿಟಿ ಇರುವುದಿಲ್ಲ ಎಂದು ಹೇಳಿದೆ.

ಕಾಸರಗೋಡು – ಮಂಗಳೂರು ಸಂಚಾರಕ್ಕಾಗಿ ದಿನವಹಿ ಪಾಸ್ ವ್ಯವಸ್ಥೆಯನ್ನು ಜುಲೈ 4ರ ವರೆಗೆ ವಿಸ್ತರಿಸಲಾಗಿದೆ. ಜೊತೆಗೆ ಹೊಸತಾಗಿ ಅರ್ಜಿ ಸಲ್ಲಿಕೆಗೂ ಅವಕಾಶ ಇರುವುದಿಲ್ಲ ಹಾಗೂ ಪಾಸ್ ಅನ್ನು ಮತ್ತೆ ನವೀಕರಿಸುವುದಕ್ಕೂ ಅವಕಾಶ ಇರುವುದಿಲ್ಲ ಎಂದು ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತರ ಮೂಲಕ ನಿರ್ದೇಶನ ನೀಡಲಾಗಿದೆ.

ಹೀಗಾಗಿ ಕರ್ನಾಟಕ – ಕೇರಳ ಸಂಚಾರವನ್ನು ಬಹುತೇಕ ಜುಲೈ 4ಕ್ಕೆ ನಿಲ್ಲಿಸಲು ರಾಜ್ಯ ಸರಕಾರ ಸೂಚನೆ ನೀಡಿದ್ದಾಗಿ ಕಾಣುತ್ತಿದೆ. ಈ ನಿಟ್ಟಿನಲ್ಲಿ ಕಾಸರಗೋಡು – ಮಂಗಳೂರು ಸಂಚಾರಕ್ಕೆ ಮತ್ತೆ ಬ್ರೇಕ್ ಹಾಕುವ ಸಾಧ್ಯತೆ ಕಂಡುಬಂದಿದೆ.

LEAVE A REPLY

Please enter your comment!
Please enter your name here