ನವದೆಹಲಿ: ಜುಲೈ 6 ರಿಂದ ತಾಜ್ಮಹಲ್ ಮತ್ತು ಇತರ ಎಎಸ್ಐ ಸಂರಕ್ಷಿತ ಸ್ಮಾರಕಗಳನ್ನು ಪುನಃ ತೆರೆಯುವ ಕುರಿತು, ಕೇಂದ್ರ ಸಂಸ್ಕೃತಿ ಸಚಿವಾಲಯದ ನಿರ್ಧಾರವನ್ನು ಆಗ್ರಾದ ಪ್ರವಾಸೋದ್ಯಮದ ಅಧಿಕಾರಿಗಳು ಸ್ವಾಗತಿಸಿದ್ದಾರೆ.
ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು, ಎಎಸ್ಐ ಸ್ಮಾರಕಗಳನ್ನು ತೆರೆಯಬಹುದಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಗುರುವಾರ ಟ್ವೀಟ್ ಮಾಡಿದ್ದಾರೆ.
ಉಳಿದ ಸ್ಮಾರಕಗಳುನ್ನೂ ಮತ್ತೆ ತೆರೆಯಬಹುದು ಎಂದು ಸರ್ಕಾರ ಹೇಳಿದೆ. ಆದರೆ ಕೊರೋನವೈರಸ್ ಪರಿಸ್ಥಿತಿಯ ಆಧಾರದ ಮೇಲೆ ರಾಜ್ಯಗಳು ಮುಕ್ತವಾಗಿವೆ ಎಂದರು.