ಜೂಜಾಟದಲ್ಲಿ ಪತ್ನಿಯನ್ನೇ ಅಡವಿಟ್ಟು ಸೋತ ಪತಿ | ಬಳಿಕ ಆಕೆಯ ಮೇಲೆ ಆ್ಯಸಿಡ್ ದಾಳಿ!

0
134
Tap to know MORE!

ಪಾಟ್ನ: ಜೂಜಾಟದಲ್ಲಿ ಪತ್ನಿಯನ್ನೇ ಅಡವಿಟ್ಟು ಸೋತ ಪತಿಯೊಬ್ಬ ನಂತರ ಆಕೆಯ ಮೇಲೆ ಆ್ಯಸಿಡ್ ಹರಡಿ ವಿಕೃತಿ ಮೆರೆದಿರುವ ಘಟನೆಯೊಂದು ಪಾಟ್ನಾದಲ್ಲಿ ನಡೆದಿದೆ.

ಜೂಜಾಟದಲ್ಲಿ ಪತ್ನಿಯನ್ನು ಇಟ್ಟ ಬಳಿಕ ತನ್ನ ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ಮಹಿಳೆ ನಿರಾಕರಿಸಿದ ಕಾರಣ ಆಕೆಯ ಮೇಲೆ ಆ್ಯಸಿಡ್ ಎರಚಿಸಿದ್ದಾನೆಂದು ತಿಳಿದುಬಂದಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಗುಂಡಿನ ದಾಳಿ | ನಾಲ್ವರಿಗೆ ಗಂಭೀರ ಗಾಯ

ಪ್ರಕರಣ ಸಂಬಂಧ ಆರೋಪಿ ಸೋನಿ ಹರಿಜಾನ್ ಎಂಬಾತನನ್ನು ಬಂಧನಕ್ಕೊಳಪಡಿಸಲಾಗಿದ್ದು, ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮೊಜಾಹಿದ್ ಪುರ್ ಪೊಲೀಸ್ ಠಾಣೆಯ ಅಧಿಕಾರಿ ರಾಜೇಶ್ ಕುಮಾರ್ ಜಾ ಅವರು ಹೇಳಿದ್ದಾರೆ.

15 ದಿನಗಳ ಹಿಂದೆಯೇ ಪತ್ನಿಯನ್ನು ಜೂಜಾಟದಲ್ಲಿ ಇಟ್ಟ ಹರಿಜಾನ್ ಸೋತಿದ್ದ. ನಿಯಮದಂತೆ ತಿಂಗಳವರೆಗಿ ಹರಿಜಾನ್ ಪತ್ನಿಯನ್ನು ಗೆದ್ದ ವ್ಯಕ್ತಿಗಳಿಗೆ ನೀಡಬೇಕಿತ್ತು. ಆದರೆ, ಹರಿಜಾನ್ ಪತ್ನಿ ಇದಕ್ಕೆ ನಿರಾಕರಿಸಿದ್ದರು. ಈ ವೇಳೆ ಹರಿಜಾನ್ ಆ್ಯಸಿಡ್ ದಾಳಿ ನಡೆಸಿದ್ದಾನೆಂದು ತಿಳಿದುಬಂದಿದೆ.

ಸುಳ್ಳು ಅತ್ಯಾಚಾರದ ಆರೋಪ : ಯುವತಿಗೆ ₹15 ಲಕ್ಷ ದಂಡ ವಿಧಿಸಿದ ಹೈಕೋರ್ಟ್!

LEAVE A REPLY

Please enter your comment!
Please enter your name here