ಜೂನ್ 18 ರಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಸ್ | ಡ್ರಾ ಅಥವಾ ಟೈ ಆದರೆ ಇತ್ತಂಡಗಳೂ ಚಾಂಪಿಯನ್ಸ್

0
66
Tap to know MORE!

ದುಬೈ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯವು ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಜೂನ್ 18ರಿಂದ 22ರ ವರೆಗೆ ಇಂಗ್ಲೆಂಡ್‌ನ ಸೌಥಾಂಪ್ಟನ್ ಮೈದಾನದಲ್ಲಿ ನಡೆಯಲಿದೆ. ಹಾಗೊಂದು ವೇಳೆ ಪಂದ್ಯ ‘ಡ್ರಾ’ ಫಲಿತಾಂಶದಲ್ಲಿ ಅಂತ್ಯಗೊಂಡರೆ ಇತ್ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುವುದು ಎಂದು ಐಸಿಸಿ ಪ್ರಕಟಿಸಿದೆ.

ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಐಸಿಸಿ ನಿಯಮಾವಳಿಗಳನ್ನು ಬಿಡುಗಡೆಗೊಳಿಸಿದೆ. ಇದರಂತೆ ಬಹುನಿರೀಕ್ಷಿತ ಪಂದ್ಯವು ‘ಡ್ರಾ’ ಅಥವಾ ‘ಟೈ’ ಫಲಿತಾಂಶದಲ್ಲಿ ಅಂತ್ಯಗೊಂಡರೆ ಇತ್ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲು ತೀರ್ಮಾನಿಸಲಾಗಿದೆ.

ಐಪಿಎಲ್ 2021ಗೆ ಪುನರ್ಜನ್ಮ! ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ದುಬೈನಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ

ಫೈನಲ್‌ನ ನಿಯಮಿತ ದಿನಗಳ ಅವಧಿಯಲ್ಲಿ ಕಳೆದು ಹೋದ ಸಮಯವನ್ನು ಸರಿದೂಗಿಸಲು ಮೀಸಲು ದಿನವನ್ನು ಇರಿಸಲಾಗಿದೆ. ಅಂದರೆ ಜೂನ್ 23 ದಿನಾಂಕವನ್ನು ರಿಸರ್ವ್ ಡೇ ಆಗಿ ಪರಿಗಣಿಸಲಾಗಿದೆ. ಐದು ದಿನಗಳ ಸಂಪೂರ್ಣ ಆಟವನ್ನು ಖಚಿತಪಡಿಸಿಕೊಳ್ಳಲು ಮೀಸಲು ದಿನವನ್ನು ಇರಿಸಲಾಗಿದೆ. ಈ ಕುರಿತು ಮ್ಯಾಚ್ ರೆಫರಿ ನಿರ್ಧರಿಸಲಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಐದು ದಿನಗಳ ಆಟಗಳ ಬಳಿಕ ಫಲಿತಾಂಶ ದಾಖಲಿಸಲು ಸಾಧ್ಯವಾಗದಿದ್ದರೆ ಅಂತಹ ಸನ್ನಿವೇಶದಲ್ಲಿ ಡ್ರಾ ಎಂದು ಘೋಷಿಸಲಾಗುವುದು. ಹಾಗೆಯೇ ಗ್ರೇಡ್ 1 ಡ್ಯೂಕ್ ಬಾಲ್‌ನಲ್ಲಿ ಪಂದ್ಯವನ್ನು ಆಯೋಜಿಸಲಾಗುವುದು ಎಂದು ತಿಳಿಸಿದೆ.

LEAVE A REPLY

Please enter your comment!
Please enter your name here