ನಮ್ಮ ಪೊರೆವ ಕರುನಾಡ ತಾಯಿ ಭುವನೇಶ್ವರಿ
ಹಳದಿ ಕುಂಕುಮದಿ ಕಂಗೊಳಿಸುವ ಪತಾಕೆಯ ಐಸಿರಿ
ಪಂಪ ರನ್ನ ಪೊನ್ನ ರ ಸಾಹಿತ್ಯ ಕೊಡುಗೆ ಅಪಾರ
ಶರಣರ ವಚನಗಳೇ ಬಾಳಿಗೆ ನಾಡಿಗೆ ಶೃಂಗಾರ
ಕವಿರಾಜಮಾರ್ಗದ ಕನ್ನಡನಾಡಿನ ವರ್ಣನೆಯ ಅಲಂಕಾರ
ದಾಸಶ್ರೇಷ್ಟರ ಕೀರ್ತನೆಗಳು ತನು ಮನಕ್ಕೆ ಭಕ್ತಿಯ ನವಸಾರ
ಯಕ್ಷಗಾನ ಜಾನಪದ ಕಲೆಗಳ ಪೋಷಿಸಿದ ಶ್ರೀಗಂಧದ ಬೀಡು
ಇದು ಕನ್ನಡಿಗರ ನೆಲೆಯೂರು ಅದುವೇ ನಮ್ಮ ಚಂದದ ಕರುನಾಡು
ನಮ್ಮೆಲ್ಲರ ನಾಡು ಚಿನ್ನದ ಬೀಡು
ಗಂಧದ ಮೇಡು ಸಾಹಿತ್ಯಗಳ ಗೂಡು
ಅದುವೇ ನಮ್ಮ ಸುವರ್ಣ ಕರ್ನಾಟಕ
ಕನ್ನಡಿಗರ ಪಾಲಿನ ನೆಚ್ಚಿನ ನಾಯಕ