ಟಿಪ್ಪು ಪಠ್ಯವನ್ನು ಕೈಬಿಟ್ಟ ಶಿಕ್ಷಣ ಇಲಾಖೆ!

1
152
Tap to know MORE!

ಕೊರೊನಾ ಮಹಾಮಾರಿಯಿಂದಾಗಿ ಶಾಲಾ – ಕಾಲೇಜುಗಳು ಕಳೆದ ಮೂರು ತಿಂಗಳಿನಿಂದಲೂ ಬಂದ್ ಆಗಿವೆ. ಇವುಗಳ ಪುನಾರಾರಂಭದ ಕುರಿತು ಇನ್ನು ಯಾವುದೇ ನಿರ್ಧಾರವಾಗಿಲ್ಲ. ಇದರ ಮಧ್ಯೆ ಶೈಕ್ಷಣಿಕ ಅವಧಿಯನ್ನು ಕಡಿತಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಶೇಕಡಾ 30ರಷ್ಟು ಪಠ್ಯವನ್ನು ಕಡಿತ ಮಾಡಲಾಗುತ್ತಿದೆ. ಇದರಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಸುಲ್ತಾನ್ ಕುರಿತ ಪಠ್ಯವನ್ನು ಏಳನೇ ತರಗತಿ ಪುಸ್ತಕದಿಂದ ತೆಗೆಯಲಾಗಿದೆ. 6 ಮತ್ತು 10ನೇ ತರಗತಿಯಲ್ಲಿ ಈ ಪಠ್ಯವನ್ನು ಮುಂದುವರೆಸಲಾಗಿದೆ.
ಪುಸ್ತಕಗಳಲ್ಲಿ ಟಿಪ್ಪು ಪಠ್ಯವನ್ನು ಕೈಬಿಡಬೇಕೆಂದು ಈ ಹಿಂದೆ ಒತ್ತಾಯ ಕೇಳಿಬಂದಿತ್ತು, ಇದರ ಪರಿಶೀಲನೆಗೆಂದು ಸಮಿತಿ ರಚನೆ ಮಾಡಿತ್ತು. ಆದರೆ ಈ ಸಮಿತಿ ಟಿಪ್ಪು ಪಠ್ಯವನ್ನು ಉಳಿಸಿಕೊಳ್ಳುವುದು ಸೂಕ್ತ ಎಂದು ಹೇಳಿದ ಕಾರಣ ಸರಕಾರ ಆ ಪಠ್ಯವನ್ನು ಹಾಗೆಯೇ ಉಳಿಸಿತ್ತು.

ಇದೀಗ ಪಠ್ಯ ಕಡಿತ ಮಾಡುವ ವೇಳೆ 30 ರಷ್ಟು ಪಠ್ಯವನ್ನು ಕೈ ಬಿಡಲಾಗಿದ್ದು, ಇದರಲ್ಲಿ ಟಿಪ್ಪು ಪಠ್ಯ ಕೂಡ ಸೇರಿದೆ.

1 COMMENT

LEAVE A REPLY

Please enter your comment!
Please enter your name here