ಟೆನಿಸ್ ಪಟು, ವಿಶ್ವ ನಂಬರ್ ವನ್ ನೊವಾಕ್ ಜೊಕೋವಿಕ್ ಗೆ ಕೊರೋನಾ

0
232
Tap to know MORE!

ಪುರುಷರ ವಿಶ್ವ ನಂಬರ್ ಒನ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರು ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಅವರೇ ಮಾಧ್ಯಮಕ್ಕೆ ತಿಳಿಸಿದರು.

ಕ್ರೊಯೇಷಿಯಾದ ಬೊರ್ನಾ ಕೋರಿಕ್, ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ಮತ್ತು ವಿಕ್ಟರ್ ಟ್ರಾಯ್ಕಿ ಈ ಮೊದಲು ಬಾಲ್ಕನ್ ಪ್ರದೇಶದಲ್ಲಿ, ಜೊಕೊವಿಕ್ ಅವರ ಆಡ್ರಿಯಾ ಟೂರ್ ಪ್ರದರ್ಶನ ಪಂದ್ಯಾವಳಿಯಲ್ಲಿ ಆಡಿದ ಬಳಿಕ ಕೊರೋನಾ ಸೋಂಕಿಗೆ ತುತ್ತಾಗಿದ್ದರು.

“ನಾವು ಬೆಲ್ಗ್ರೇಡ್ ಗೆ ಬಂದ ತತ್ ಕ್ಷಣ, ನಮ್ಮನ್ನು ಪರೀಕ್ಷೆಗೆ ಒಳಪಡಿಸಿದ್ದರು” ಎಂದು 33 ವರ್ಷದ ಜೋಕೊವಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರು ಯಾವುದೇ ರೋಗಲಕ್ಷಣಗಳನ್ನು ಹೊಂದಿರಲಿಲ್ಲ ಎಂದು ಇದೇ ವೇಳೆ ಹೇಳಿದರು. “ಈ ಮೊದಲು, ನನ್ನ ಹೆಂಡತಿಗೂ ಕೊರೋನಾ ಇರುವುದು ದೃಢಪಟ್ಟಿತ್ತು, ಆದರೆ ನಮ್ಮ ಮಕ್ಕಳ ಫಲಿತಾಂಶಗಳು ನೆಗೆಟಿವ್ ಬಂದಿದೆ.

“ಸೋಂಕಿನ ಪ್ರತಿಯೊಂದು ಪ್ರಕರಣಕ್ಕೂ ನಾನು ತುಂಬಾ ವಿಷಾದಿಸುತ್ತೇನೆ. ಇದು ಯಾರ ಆರೋಗ್ಯ ಪರಿಸ್ಥಿತಿಯನ್ನು ಹಾಳು ಮಾಡುವುದಿಲ್ಲ ಮತ್ತು ಎಲ್ಲರೂ ಶೀಘ್ರ ಗುಣಮುಖರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಮುಂದಿನ 14 ದಿನಗಳವರೆಗೆ ನಾನು ಕ್ವಾರಂಟೈನ್ ನಲ್ಲಿ ಇರುತ್ತೇನೆ ಮತ್ತು ಪರೀಕ್ಷೆಯನ್ನು ಪ್ರತಿ ಐದು ದಿನಗಳಿಗೊಮ್ಮೆ ಪುನರಾವರ್ತಿಸುತ್ತೇನೆ” ಎಂದರು.

LEAVE A REPLY

Please enter your comment!
Please enter your name here