ಟೋಕಿಯೋ ಒಲಿಂಪಿಕ್ಸ್‌ಗೆ ಅಧಿಕೃತ ಚಾಲನೆ – ಪಥಸಂಚಲನದಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಮೇರಿ ಕೋಮ್, ಮನ್‌ಪ್ರೀತ್ ಸಿಂಗ್

0
480
Tap to know MORE!

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ಗೆ ಅಧಿಕೃತ ಚಾಲನೆ ಸಿಕ್ಕಿದೆ. ಜಪಾನ್‌ನ ಕ್ರೀಡಾಳು ನವೊಮಿ ಒಸಾಕ ಒಲಿಂಪಿಕ್‌ ಕ್ರೀಡಾಜ್ಯೋತಿಯನ್ನು ಬೆಳಗಿಸಿದರು. ಜಪಾನ್‌ ಸಾಮ್ರಾಟ ನಾರೂಹಿತೊ ಟೋಕಿಯೊ ಒಸಿಂಪಿಕ್ಸ್‌ಗೆ ಅಧಿಕೃತ ಚಾಲನೆ ನೀಡಿದರು.

ಒಲಿಂಪಿಕ್ಸ್‌ ಉದ್ಘಾಟನೆ ವೇಳೆ ನ್ಯಾಷನಲ್‌ ಸ್ಟೇಡಿಯಂನಲ್ಲಿ 6 ಭಾರಿ ವಿಶ್ವಚಾಂಪಿಯನ್‌ ಮೇರಿ ಕೋಮ್‌ ಮತ್ತು ಭಾರತದ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ನೇತೃತ್ವದಲ್ಲಿ ಭಾರತೀಯ ಕ್ರೀಡಾಪಟುಗಳು ಪಥಸಂಚನ ನಡೆಸಿದರು.

ಆಳ್ವಾಸ್‌ನ ಇಬ್ಬರು ಕ್ರೀಡಾ ವಿದ್ಯಾರ್ಥಿಗಳು ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆ | ತಲಾ 1 ಲಕ್ಷ ರೂಪಾಯಿ ನೀಡಿದ ಡಾ. ಆಳ್ವ

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು, ಕುಸ್ತಿಪಟು ಬಜರಂಗ್‌ ಪುನಿಯಾ, ಮಹಿಳಾ ಕುಸ್ತಿಪಟು ವಿನೇಶಾ ಪೋಗಟ್‌, ಬಾಕ್ಸರ್‌ ಅಮಿತ್‌ ಪಂಗಲ್‌, ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು, ಶೂಟಿಂಗ್‌ ಸ್ಪರ್ಧಿಗಳಾದ ಮನು ಭಾಕರ್‌ ಮತ್ತು ಸೌರಭ್‌ ಚೌಧರಿ ಜೋಡಿ, ಜಾವೆಲಿನ್‌ ಥ್ರೋ ಪಟು ನೀರಜ್‌ ಚೋಪ್ರಾ ಟೋರಿಯೊ ಒಲಿಂಪಿಕ್ಸ್‌ ಅಂಗಣದಲ್ಲಿರುವ ಭಾರತದ ಭರವಸೆ ಕ್ರೀಡಾಪಟುಗಳಾಗಿದ್ದಾರೆ.

LEAVE A REPLY

Please enter your comment!
Please enter your name here