“ಚುನಾವಣೆಯಲ್ಲಿ ಟ್ರಂಪ್ ಸೋತರೆ 9/11 ಮಾದರಿ ದಾಳಿ ನಿಶ್ಚಿತ”

0
203
Tap to know MORE!

ನ್ಯೂಯಾರ್ಕ್‌: ಅಮೇರಿಕಾದಲ್ಲಿ ನವೆಂಬರ್‌ ತಿಂಗಳಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್ ಸೋತರೆ 9/11 ಮಾದರಿಯ ಮತ್ತೂಂದು ದಾಳಿ ಸಂಭವಿಸಬಹುದು ಎಂದು ಜಾಗತಿಕ ಉಗ್ರನಾಗಿದ್ದ ಒಸಾಮಾ ಬಿನ್‌ ಲಾಡೆನ್‌ನ ಸಹೋದರಿಯ ಪುತ್ರಿ ಎಚ್ಚರಿಸಿದ್ದಾರೆ.

33ರ ಹರೆಯದ ನೂರ್‌ ಬಿನ್‌ ಲಾಡೆನ್‌, “ಡೊನಾಲ್ಡ್‌ ಟ್ರಂಪ್‌ ಅವಧಿಯಲ್ಲಿ ಉಗ್ರವಾದವನ್ನು ಬೇರುಮಟ್ಟದಲ್ಲಿ ಅಳಿಸಿ ಹಾಕುವ ಸಾಕಷ್ಟು ಪ್ರಯತ್ನಗಳು ನಡೆದಿವೆ. ನಾನು ಅವರನ್ನು ದೂರದಿಂದ ನೋಡಿದ್ದೇನೆ. ಆ ಮನುಷ್ಯನ ಸಂಕಲ್ಪವನ್ನು ನಾನು ಮೆಚ್ಚುತ್ತೇನೆ. ಹಾಗಾಗಿ ಟ್ರಂಪ್‌ರನ್ನು ಮರು ಆಯ್ಕೆ ಮಾಡಬೇಕು. ಒಂದು ವೇಳೆ ಜೋ ಬೈಡೆನ್‌ ಅಧ್ಯಕ್ಷರಾಗಿ ಆಯ್ಕೆಯಾದರೆ ಉಗ್ರರಿಂದ 9/11 ಮಾದರಿಯ ದಾಳಿ ಪುನಃ ಸಂಭವಿಸುವ ಸಾಧ್ಯತೆ ಇದೆ” ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಉಗ್ರ ಒಸಾಮಾ ಬಿನ್‌ ಲಾಡೆನ್‌ಗಿಂತ ಭಿನ್ನ ಆಲೋಚನೆ, ಭಿನ್ನ ವ್ಯಕ್ತಿತ್ವ ಹೊಂದಿರುವ ನೂರ್‌ ಬಿನ್‌, ಇದೇ ಮೊದಲ ಬಾರಿಗೆ ಸಂದರ್ಶನದಲ್ಲಿ ಬಿಚ್ಚುಮಾತುಗಳನ್ನಾಡಿದ್ದಾರೆ.

LEAVE A REPLY

Please enter your comment!
Please enter your name here