ಇನ್ನು ಮುಂದೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಠೇವಣಿ ಇಡಲು ಹಾಗೂ ಹಿಂಪಡೆಯಲು ಬೀಳಲಿದೆ ಶುಲ್ಕ!

0
87

ಕೆಲವು ಬ್ಯಾಂಕುಗಳಲ್ಲಿನ ಗ್ರಾಹಕರು, ಇನ್ನು ಮುಂದೆ ಠೇವಣಿ ಇಡಲು ಮತ್ತು ಬ್ಯಾಂಕ್ ಖಾತೆಯಿಂದ ಹಣವನ್ನು ತೆಗೆಯಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವರದಿಗಳ ಪ್ರಕಾರ, ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ, ನಿಗದಿತ ಮಿತಿಗಳನ್ನು ಮೀರಿದ ವಹಿವಾಟುಗಳಿಗೆ ನವೆಂಬರ್ 1 ರಿಂದ ಶುಲ್ಕ ವಿಧಿಸಲು ಪ್ರಾರಂಭಿಸಿದೆ.

ಬ್ಯಾಂಕ್ ಆಫ್ ಇಂಡಿಯಾ, ಪಿಎನ್‌ಬಿ, ಆಕ್ಸಿಸ್ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್‌ನಂತಹ ಇತರ ಬ್ಯಾಂಕುಗಳ ಹೆಸರುಗಳು ಸಹ ವರದಿಗಳಲ್ಲಿ ಹೊರಹೊಮ್ಮುತ್ತಿವೆ. ಆದರೆ ಅವರು ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಂಡಿಲ್ಲ.

ಒಂದು ತಿಂಗಳಲ್ಲಿ ಮೂರು ಬಾರಿ ನಮ್ಮ ಖಾತೆಯಿಂದ ಹಣವನ್ನು ಉಚಿತವಾಗಿ ತೆಗೆಯಬಹುದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅದರ ನಂತರ ವಹಿವಾಟು ಶುಲ್ಕವಾಗಿ ₹150 ವಿಧಿಸಲಾಗುತ್ತದೆ.

ಅದೇ ರೀತಿ, ತಿಂಗಳಲ್ಲಿ ಮೂರು ಬಾರಿ ಉಚಿತವಾಗಿ ಠೇವಣಿ ಇಡಬಹುದು. ಆದರೆ ನಂತರದ ಪ್ರತಿ ವಹಿವಾಟಿಗೆ ₹40 ವಿಧಿಸಲಾಗುತ್ತದೆ.

LEAVE A REPLY

Please enter your comment!
Please enter your name here