ಡಿಕೆಶಿ ಪದಗ್ರಹಣಕ್ಕೆ ಭರದ ಸಿದ್ಧತೆ

0
87

ಬೆಂಗಳೂರು: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ ಕೆ ಶಿವಕುಮಾರ್ ಅವರ ಪದಗ್ರಹಣ ಇಂದು ಕೆಪಿಸಿಸಿ ಕಾರ್ಯಾಲಯದಲ್ಲಿ ನಡೆಯಲಿದೆ. ಅಧ್ಯಕ್ಷರಾದ 114 ದಿನಗಳ ಬಳಿಕ ನಡೆಯಲಿರುವ ಪದಗ್ರಹಣ ವಿಶ್ವದಾಖಲೆಯ ವರ್ಚುವಲ್ ಪದಗ್ರಹಣವಾಗಿರಲಿದೆ.

ಬೆಳಿಗ್ಗೆ 10:20ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಇದಾದ ಬಳಿಕ 11:30 ರಿಂದ ಪ್ರಧಾನ ವೇದಿಕೆಯಲ್ಲಿ 41ನೇ ಅಧ್ಯಕ್ಷರಾಗಿ ಡಿಕೆಶಿ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನೆರವೇರಲಿದೆ. ಸುಮಾರು ಎರಡು ವರೆ ಗಂಟೆಗಳ ಕಾಲದಷ್ಟು ಕಾರ್ಯಕ್ರಮವನ್ನು ಮಿತಿಗೊಳಿಸಲಾಗಿದೆ. ವೇದಿಕೆಯಲ್ಲಿ 15 ಮಂದಿಗೆ ಮಾತ್ರ ಇರಲು ಅವಕಾಶ ಮಾಡಲಾಗಿದೆ.

ರಾಜ್ಯದ ಸುಮಾರು 7800 ಕಡೆಗಳಲ್ಲಿ ಪದಗ್ರಹಣದ ಲೈವ್ ಪ್ರಸರಣ ನಡೆಯಲಿದೆ. ಝೂಮ್ ಆಪ್ ನಲ್ಲಿಯೂ ಪದಗ್ರಹಣದ ವೀಕ್ಷಣೆಗೆ ಅವಕಾಶವಿದೆ. 10 ಲಕ್ಷ ಕಾರ್ಯಕರ್ತರು ಕಾರ್ಯಕ್ರಮ ವೀಕ್ಷಿಸಲಿದ್ದಾರೆ.

LEAVE A REPLY

Please enter your comment!
Please enter your name here