ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಅವರ ವಿವಾಹವನ್ನು ಮಾಜಿ ಮುಖ್ಯಮಂತ್ರಿ, ಎಸ್ ಎಂ. ಕೃಷ್ಣ ಅವರ ಮೊಮ್ಮಗನೊಂದಿಗೆ ನೆರವೇರಿಸಲು ಎರಡೂ ಕುಟುಂಬಗಳು ನಿರ್ಧರಿಸಿವೆ. ಸೋಮವಾರ ಎಸ್ ಎಂ ಕೃಷ್ಣ ಕುಟುಂಬದ ಸದಸ್ಯರು ಡಿಕೆಶಿ ಮನೆಗೆ ಆಗಮಿಸಿ ಕನ್ಯಾ ನೋಡುವ ಶಾಸ್ತ್ರವನ್ನು ನೆರವೇರಸಿದ್ದಾರೆ. ಐಶ್ವರ್ಯ ಹಾಗೂ ಕಾಫಿ ಡೇ ಸಿದ್ಧಾರ್ಥ್ ಅವರ ಪುತ್ರ ಅಮರ್ತ್ಯ ಹೆಗಡೆ ಅವರು ಹಿರಿಯರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡರು. ಈ ನಿಟ್ಟಿನಲ್ಲಿ ಡಿಕೆಶಿ ಪುತ್ರಿ ಕಾಫಿ ಡೇ ಸೊಸೆ ಶೀಘ್ರವೇ ಆಗಲಿದ್ದಾರೆ..!