ಡಿಕೆಶಿಗೆ ಸೋಲು – ಐಟಿ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ!

0
301
Tap to know MORE!

ಡಿ.ಕೆ.ಶಿವಕುಮಾರ್ ವಿರುದ್ಧ ಐಟಿ ಇಲಾಖೆ 2017 ಆಗಸ್ಟ್ ನಲ್ಲಿ ತೆರಿಗೆ ವಂಚನೆ ಕೇಸ್ ದಾಖಲಿಸಿದ್ದು, ಬಳಿಕ ಐಪಿಸಿ ಪ್ರಕಾರವೂ ಕೇಸ್ ದಾಖಲಾಗಿತ್ತು. ವಿಚಾರಣಾ ಕೋರ್ಟ್ ನ ತೀರ್ಮಾನವನ್ನು ಕರ್ನಾಟಕ ಹೈಕೋರ್ಟ್ 2019ರ ನವೆಂಬರ್ ನಲ್ಲಿ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಶಿವಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಇದೀಗ ತಮ್ಮ ವಿರುದ್ಧ ಆದಾಯ ತೆರಿಗೆ ವಂಚನೆ ಪ್ರಕರಣದ ವಿಚಾರಣೆಗೆ ತಡೆ ನೀಡುವಂತೆ ಕೋರಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಗುರುವಾರ ತಿರಸ್ಕರಿಸಿದೆ.

ಇದನ್ನೂ ಓದಿ : ಭ್ರಷ್ಟಾಚಾರ ಆರೋಪ : ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಿದ ಬಿಜೆಪಿ

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯಂ ಅವರನ್ನು ಒಳಗೊಂಡ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿದೆ.

ಐಟಿ ಕೇಸಿನ ಕ್ರಿಮಿನಲ್ ಪ್ರೊಸೀಡಿಂಗ್ಸ್ ಗೆ ತಡೆ ನೀಡಲು ನಿರಾಕರಿಸಿದ ನ್ಯಾಯಪೀಠ, ಆದಾಯ ತೆರಿಗೆ ಇಲಾಖೆಗೂ ತಮ್ಮ ಪ್ರತಿಕ್ರಿಯೆ ದಾಖಲಿಸುವುದಕ್ಕೆ ಅವಕಾಶ ನೀಡಿದೆ.

ಐಟಿ ಇಲಾಖೆಯ ಪರವಾಗಿ ವಿಚಾರಣೆಗೆ ಹಾಜರಾದ ನ್ಯಾಯವಾದಿ ಝೊಹೇದ್ ಹುಸ್ಸೇನ್ ಅವರು ಕೌಂಟರ್ ಅಫಿಡವಿಟ್ ಸಲ್ಲಿಸುವುದಕ್ಕೆ ಎರಡು ವಾರಗಳ ಸಮಯಾವಕಾಶ ಬೇಕು ಎಂದು ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದ್ದರು.

ನ್ಯಾಯಪೀಠ ಇದಕ್ಕೆ ಅನುಮತಿ ನೀಡಿದ್ದು, ಐಟಿ ಇಲಾಖೆ ಅಫಿಡವಿಟ್ ಸಲ್ಲಿಸಿದ ಒಂದು ವಾರದೊಳಗೆ ದೂರುದಾರರಿಗೆ ಏನಾದರೂ ಆಕ್ಷೇಪವಿದ್ದರೆ ಪ್ರತಿಕ್ರಿಯೆ ದಾಖಲಿಸಬಹುದು. ಮುಂದಿನ ವಿಚಾರಣೆ ನಾಲ್ಕು ವಾರದ ನಂತರ ಇರಲಿದೆ ಎಂದು ಹೇಳಿದೆ.

LEAVE A REPLY

Please enter your comment!
Please enter your name here