ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ “ಆತ್ಮನಿರ್ಭರ ಭಾರತ್” ಕರೆಗೆ ಬಹುತೇಕ ಸ್ಟಾರ್ಟ್ ಅಪ್ ಕಂಪೆನಿಗಳು ಭಾರತದಲ್ಲಿ ತಲೆಯೆತ್ತುತ್ತಿದೆ. ಅದರ ಬಳಿಕ, ಚೀನಾ ಮೂಲದ ಆ್ಯಪ್ಗಳನ್ನು ನಿಷೇಧಿಸಿದ್ದರಿಂದ ಹಲವಾರು ಪರ್ಯಾಯ ಆ್ಯಪ್ಗಳು ಬರಲಾರಂಭಿಸಿದೆ. ಕೇವಲ ಒಂದೆರಡು ತಿಂಗಳೊಳಗಾಗಿ ದೇಶದಲ್ಲಿ ಮೊಬೈಲ್ ಆ್ಯಪ್ಗಳ ನಡುವೆ ಸ್ಪರ್ಧೆ ಶುರುವಾಗಿದೆ.
ಇದೇ ರೀತಿ, ಮಂಗಳೂರು ಮೂಲದ ಸ್ಟಾರ್ಟಪ್ ಕಂಪನಿಯಾದ ಡಿಜಿಯೋಗಿ ಟೆಕ್ನಾಲಜೀಸ್, ವಿನೂತನ ಲೂಡೋ ಗೇಮ್ ಒಂದನ್ನು ಹೊರತಂದಿದೆ.
ಈಗಲೇ ಡೌನ್ಲೋಡ್ ಮಾಡಿ – ಡಿಜಿಯೋಗಿ ಲೂಡೋ ಚ್ಯಾಂಪ್
ಇತರ ಲೂಡೋ ಆ್ಯಪ್ಗಳಿಗೆ ಸೆಡ್ಡು ಹೊಡೆಯುವಂತೆ ಮೇಲ್ನೋಟಕ್ಕೆ ಕಾಣುವ “ಡಿಜಿಯೋಗಿ ಲೂಡೋ ಚ್ಯಾಂಪ್“, ಆಟಗಾರರಿಗೆ ವಿಭಿನ್ನ ಅನುಭವ ನೀಡಲಿದೆ. ಈ ಆ್ಯಪ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಡಿಜಿಯೋಗಿ ಸ್ಥಾಪಕ ಮತ್ತು ಮಾರ್ಕೆಟಿಂಗ್ ಹೆಡ್ ನಾಗರಾಜ್ ಬಾಳೆಗದ್ದೆ, “ವೆಬ್ ಡೆವಲಪ್ಮೆಂಟ್ ಮೂಲಕ ಶುರು ಆದ ನಮ್ಮ ಪಯಣವು ಈಗ ಆ್ಯಪ್ ಡೆವಲಪ್ಮೆಂಟ್ಗೂ ಕಾಲಿಟ್ಟಿದೆ. ಲೂಡೋ ಚ್ಯಾಂಪ್ ನಮ್ಮ ಮೊದಲ ಆ್ಯಪ್ ಆಗಿದ್ದು, ಇನ್ನೂ ಹಲವಾರು ಮೊಬೈಲ್ ಆ್ಯಪ್ಗಳನ್ನು ಹೊರತರಲಿದ್ದೇವೆ” ಎಂದರು.
ಡಿಜಿಯೋಗಿ ಟೆಕ್ನಾಲಜಿಸ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಆರ್ಪಿ ಸಿಸ್ಟಮ್ ಹಾಗೂ ಅನೇಕ ರೀತಿಯ ಸಾಪ್ಟ್ವೇರ್ ಸೇವೆಗಳನ್ನು ನೀಡುವ ಕಂಪನಿಯಾಗಿದ್ದು, ಗುಣಮಟ್ಟದ ಆ್ಯಪ್ಗಳನ್ನು ಭಾರತೀಯ ಮಾರುಕಟ್ಟೆಗೆ ನೀಡಲು ಮುಂದಾಗಿದೆ. ಡಿಜಿಯೋಗಿ ತಂಡದಿಂದ ವೀಡಿಯೊ ಕಾಲಿಂಗ್ ಆ್ಯಪ್, ರೀಡರ್ ಆ್ಯಪ್, ಸ್ಕ್ಯಾನರ್ ಆ್ಯಪ್ ಗಳನ್ನು ಪರಿಚಯಿಸಲಿದೆ ಎಂದು ನಾಗರಾಜ್ ಹೇಳಿದರು.