ಕೋವಿಡ್ ಲಸಿಕೆ ಪಡೆದವರು ಡೆಲ್ಟಾ ರೂಪಾಂತರದಿಂದ ಹೆಚ್ಚಿನ ರಕ್ಷಣೆಯನ್ನು ಪಡೆಯುತ್ತಾರೆ: ಐಸಿಎಂಆರ್

0
166
Tap to know MORE!

ನವದೆಹಲಿ: ಕೊರೋನಾ ವಿರುದ್ಧ ಹೋರಾಡಲು ಇರುವ ಏಕೈಕ ಅಸ್ತ್ರ ಲಸಿಕೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಅಲ್ಲದೆ, ಸುಪ್ರೀಂ ಕೋರ್ಟ್​ ಆದೇಶದ ಮೇರೆಗೆ ಈಗಾಗಲೇ ಲಸಿಕೆ ನಿಡುವ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು, ಎಲ್ಲೆಡೆ ಯಶಸ್ವಿಯಾಗಿ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಆದರೆ, ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR-Indian Council of Medical Research) ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಒಂದು ಮಹತ್ವದ ಅಧ್ಯಯನವನ್ನು ನಡೆಸಿದ್ದು, “ಕೊರೋನಾ ಒಂದು ಅಥವಾ ಎರಡು ಡೋಸ್​ ಲಸಿಕೆ ಪಡೆದವರು ಕೊರೋನಾದಿಂದ ಶೀಘ್ರದಲ್ಲೇ ಚೇತರಿಸಿಕೊಂಡಿದ್ದಾರೆ ಮತ್ತು ಡೆಲ್ಟಾ ರೂಪಾಂತರದ ವಿರುದ್ಧ ತುಲನಾತ್ಮಕವಾಗಿ ಹೆಚ್ಚಿನ ರಕ್ಷಣೆಯನ್ನು ಹೊಂದಿದ್ದಾರೆ” ಎಂಬುದನ್ನು ಸಂಶೋಧನೆ ಮೂಲಕ ಕಂಡುಹಿಡಿದಿದ್ದಾರೆ.

10 ದಿನಗಳಲ್ಲಿ ರಾಜ್ಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ: ಡಿಸಿಎಂ

ಐಸಿಎಂಆರ್ ಅಧ್ಯಯನದ ಪ್ರಕಾರ, ಲಸಿಕೆ ಪಡೆದ ನಂತರದ ಫಲಿತಾಂಶದಲ್ಲಿ ಸೋಂಕಿನ ವಿರುದ್ಧ ಹೋರಾಟದಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ. ಅಲ್ಲದೆ, ಸೆಲ್ಯುಲಾರ್ ರೋಗನಿರೋಧಕ ಪ್ರತಿಕ್ರಿಯೆಯು ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದಕ್ಕೆ ಪುರಾವೆ ನೀಡುತ್ತದೆ ಎಂದು ತಿಳಿದುಬಂದಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಕೋವಿಶೀಲ್ಡ್ ಲಸಿಕೆಗಳನ್ನು ಮುಂಚೆಯೇ ಪಡೆದವರು ಮತ್ತು ಕೋವಿಡ್​ -19 ಸೋಂಕಿನಿಂದ ಚೇತರಿಸಿಕೊಂಡ ನಂತರ ಲಸಿಕೆ ಪಡೆದವರಲ್ಲಿ ಡೆಲ್ಟಾ ರೂಪಾಂತರದ ತಟಸ್ಥೀಕರಣ ಅಧ್ಯಯನವನ್ನು ಐಸಿಎಂಆರ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ, ಪುಣೆ ಮತ್ತು ನರಶಸ್ತ್ರಚಿಕಿತ್ಸೆ, ಕಮಾಂಡ್ ಆಸ್ಪತ್ರೆ (ಸದರ್ನ್ ಕಮಾಂಡ್), ಸಶಸ್ತ್ರ ಪಡೆಗಳ ವಿಜ್ಞಾನಿಗಳು ಮಾಡಿದ್ದಾರೆ.

LEAVE A REPLY

Please enter your comment!
Please enter your name here