ಡ್ರೋನ್ ಪ್ರತಾಪ್ ವಿರುದ್ಧ ಎಫ್ಐಆರ್ – ಹುಡುಕಾಟದಲ್ಲಿ ಪೋಲೀಸರು!

0
261
Tap to know MORE!

ಈಗ ಎಲ್ಲಿ ನೋಡಿದರೂ ಡ್ರೋನ್ ಪ್ರತಾಪನದ್ದೇ ಸುದ್ದಿ. ಸುದ್ದಿ ಮಾಧ್ಯಮಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳಲ್ಲೂ ಆತನದ್ದೇ ಹವಾ! ವಿಶೇಷ ಡ್ರೋನ್ ತಯಾರಿಸಿದ್ದಾಗಿ ಹೇಳಿ, ಜನಮನ್ನಣೆ ಗಳಿಸಿದ್ದ ಪ್ರತಾಪ್, ಈಗ ಅವನು ಹೇಳಿರುವುದು ಸುಳ್ಳು ಎಂದು ಬಹು ಆಯಾಮಗಳಿಂದ ಖಾತ್ರಿಯಾಗುತ್ತಿದೆ. ಅದೇ ಪ್ರತಾಪ್ ಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾನೆ. ಹೀಗಾಗಿ ಆತನ ವಿರುದ್ಧ ಎಫ್ ಐಆರ್ ದಾಖಲಿಸಿರುವ ಪೊಲೀಸರು, ಆತನ ಬಂಧನಕ್ಕೆ ವಿಶೇಷ ತಂಡವೊಂದನ್ನು ರಚಿಸಿ, ಹುಡುಕಾಟ ಆರಂಭಿಸಿದ್ದಾರೆ.

ಆದರೆ ಈ ಬಾರಿ ಪ್ರಕರಣ ದಾಖಲಾಗಿರುವುದು ಡ್ರೋನ್ ವಿಚಾರಕ್ಕೆ ಅಲ್ಲ. ಬದಲಾಗಿ, ಆತ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಕಾರಣ ಪೋಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ! ‘ಡ್ರೋನ್’ ಪ್ರತಾಪ್ ಇದೇ ತಿಂಗಳ 15 ರಂದು ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದ. ಹೊರ ರಾಜ್ಯದಿಂದ ಬಂದಿದ್ದರಿಂದ, ಆತನು ತಲಘಟ್ಟಪುರದ ತನ್ನ ಅಪಾರ್ಟ್ ಮೆಂಟ್ ವೊಂದರಲ್ಲಿ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದ. ಹಾಗಾಗಿ, 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕಿದ್ದ ಪ್ರತಾಪ್, ಬೆಂಗಳೂರಿಗೆ ಬಂದಿಳಿದ ಮರುದಿನವೇ, ನಿಯಮವನ್ನು ಉಲ್ಲಂಘಿಸಿ ಚಾನೆಲ್ ವೊಂದರ ಸಂದರ್ಶನದಲ್ಲಿ ಪಾಲ್ಗೊಂಡಿದ್ದ.

ಪ್ರತಾಪ್ ಕ್ವಾರಂಟೈನ್ ನಿಯಮಗಳು ಉಲ್ಲಂಘಿಸಿರುವ ಕಾರಣ ಬಿಬಿಎಂಪಿ ಅಧಿಕಾರಿಗಳು ತಲಘಟ್ಟಪುರ ಠಾಣೆಯಲ್ಲಿ ದೂರು ದಾಖಲಿಸಿ, ಆತನ ಹುಡುಕಾಟದಲ್ಲಿದ್ದಾರೆ.

LEAVE A REPLY

Please enter your comment!
Please enter your name here