ತಲಕಾವೇರಿ ಪೂಜಾ ಕೈಂಕರ್ಯವನ್ನು ಬ್ರಾಹ್ಮಣರ ಬದಲು ನಮಗೆ ನೀಡಿ : ಜಿಲ್ಲಾಧಿಕಾರಿಗೆ ಮನವಿ

0
156
Tap to know MORE!

ಇತ್ತೀಚೆಗೆ ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕ ನಾರಾಯಣ ಆಚಾರ್ ಅವರು ಮೃತಪಟ್ಟಿದ್ದರು. ಇದಾದ ಬೆನ್ನಲ್ಲೇ ತಲಕಾವೇರಿ ಪೂಜಾ ಕೈಂಕರ್ಯವನ್ನು ನಮಗೆ ನೀಡುವಂತೆ ಅಖಿಲ ಅಮ್ಮಕೊಡವ ಸಮಾಜ ಕೊಡಗಿನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ .

150 ವರ್ಷಗಳ ಹಿಂದೆ ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ಅಮ್ಮ ಕೊಡವರು ಪೂಜೆ ನೆರವೇರಿಸುತಿದ್ದರು. ಕಾಲ ಬದಲಾದಂತೆ ಆ ಪೂಜಾ ಕೈಂಕರ್ಯವನ್ನು ಬ್ರಾಹ್ಮಣ ಅರ್ಚಕರು ನೆರವೇರಿಸಿಕೊಂಡು ಬಂದಿದ್ದರು. ತಲಕಾವೇರಿಯಲ್ಲಿ ಪೂಜೆ ಸಲ್ಲಿಸುತಿದ್ದ ಅರ್ಚಕ ನಾರಾಯಣ ಆಚಾರ್ ಮತ್ತು ಅವರ ಕುಟುಂಬ ಭೂಕುಸಿತದಲ್ಲಿ ಮೃತಪಟ್ಟಿದೆ. ಈಗ ತಲಕಾವೇರಿಯಲ್ಲಿ ಮತ್ತೆ ಪೂಜಾ ಕೈಂಕರ್ಯ ನೆರವೇರಿಸಲು ನಮಗೆ ಅವಕಾಶ ನೀಡುವಂತೆ ಅಖಿಲ ಅಮ್ಮಕೊಡವ ಸಮಾಜ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಅಮ್ಮಕೊಡವರು ಪೂಜೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವುದರಲ್ಲಿ ನ್ಯಾಯವಿದೆ. ಅವರಿಗೆ ಅವಕಾಶ ಕೊಡುವುದರಲ್ಲಿ ತಪ್ಪಿಲ್ಲ ಎನ್ನೋದು ಅಮ್ಮಕೊಡವ ಮುಖಂಡರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here