ಆಗಸ್ಟ್ 10ರಂದು ಹಸನಪುರದ ನಿವಾಸಿ ಶಬನಂ, ಮುರಾದಾಬಾದ್ ಜಿಲ್ಲೆಯ ಸದ್ದಾಂ ಜೊತೆ ಮದುವೆ ಮಾಡಿಕೊಂಡಿದ್ದರು. ಮದುವೆಯಾದ ಮೂರನೇ ದಿನಕ್ಕೆ ತವರು ಮನೆಗೆ ಹಿಂದಿರುಗಿದ ಶಬನಂ, ಎಂಟನೇ ದಿನ ಪತಿ ಸದ್ದಾಂ ನಿಂದ ತಲಾಖ್ ಪಡೆದಿರುವುದು ಬೆಳಕಿಗೆ ಬಂದಿದೆ.
ಆ.18 ರಂದು ಪತ್ನಿಯ ಮನೆಗೆ ಆಗಮಿಸಿದ ಸದ್ದಾಂ ತಲಾಖ್ ಹೇಳಿ ಹೋಗಿದ್ದಾನೆ.
ಇದನ್ನೂ ಓದಿ : ಶ್ರೀರಾಮನಿಗೆ ಪೂಜೆ ಸಲ್ಲಿಸಿದ ಮುಸ್ಲಿಂ ಮಹಿಳೆಯರಿಗೆ ಜೀವ ಬೆದರಿಕೆ!
ವರದಕ್ಷಿಣೆ ನೀಡದ ಹಿನ್ನೆಲೆ ಸದ್ದಾಂ ಪತ್ನಿಗೆ ತಲಾಖ್ ನೀಡಿದ್ದಾನೆ ಎನ್ನಲಾಗಿದೆ. “ನಮ್ಮ ಅನುಕೂಲಕ್ಕೆ ತಕ್ಕಂತೆ ಬೈಕ್ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನ ನೀಡಿ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ವರನ ಕುಟುಂಬಸ್ಥರಿಗೆ ವರೋಪಚಾರ ಸಮಾಧಾನ ತಂದಿರಲಿಲ್ಲ” ಎಂದು ಶಬನಂ ತಂದೆ ಪೊಲೀಸರ ಮುಂದೆ ಹೇಳಿದ್ದಾರೆ.
ಸದ್ದಾಂ ಪೋಷಕರು ಮದುವೆಯಲ್ಲಿ 5 ಲಕ್ಷ ನಗದು ಮತ್ತು ಒಂದು ಕಾರ್ ನೀಡಬೇಕೆಂದು ಡಿಮ್ಯಾಂಡ್ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ವರದಕ್ಷಿಣೆ ತರದ ಹಿನ್ನೆಲೆ ಮೂರನೇ ದಿನಕ್ಕೆ ಶಬನಂಳನ್ನ ತವರು ಮನೆಗೆ ಕಳುಹಿಸಲಾಗಿತ್ತು. ಆಗಸ್ಟ್ 18ರಂದು ಮನೆಯ ಬಳಿ ಬಂದ ಸದ್ದಾಂ ಪತ್ನಿಯನ್ನ ಕರೆದು ಮೂರು ಬಾರಿ ತಲಾಖ್ ಹೇಳಿ ಹೋಗಿದ್ದಾನೆ.
ಮಹಿಳೆಯ ತಂದೆ ದೂರಿನನ್ವಯ ಸದ್ದಾಂ ಸೇರಿದಂತೆ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.