ಬುದ್ಧಿವಾದ ಹೇಳಿದ್ದಕ್ಕೆ ತಹಶೀಲ್ದಾರ್ ಮೇಲೆಯೇ ಹಲ್ಲೆ!

0
160
Tap to know MORE!

ಬಾಗಲಕೋಟೆ : ತಾಲೂಕಿನಲ್ಲಿ ನೆರೆ ಹಾಗೂ ಮಳೆಯಿಂದ ಹಾನಿಯಾದ ಅಧ್ಯಯನಕ್ಕೆ ಮಂಗಳವಾರ ಕೇಂದ್ರ ಅಧ್ಯಯನ ತಂಡ ಆಗಮಿಸಿತ್ತು. ಬಾದಾಮಿ ತಾಲೂಕು ವ್ಯಾಪ್ತಿಯಲ್ಲಿ ಅಧ್ಯಯನ ಮುಗಿಸಿ ಹೊರಟ ಕೇಂದ್ರ ತಂಡವನ್ನು ಲೋಕಾಪೂರದವರೆಗೆ ಬಿಟ್ಟು ನೀರಬೂದಿಹಾಳ ಮಾರ್ಗವಾಗಿ ಬಾದಾಮಿಗೆ ತೆರಳುತ್ತಿದ್ದ ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಆ ಗ್ರಾಮದ ಬಸ್‌ ನಿಲ್ದಾಣದ ಹತ್ತಿರ ಇಕ್ಕಟ್ಟಾದ ರಸ್ತೆ ಮೇಲೆ ಲಾರಿ ಅಡ್ಡಲಾಗಿ ನಿಲ್ಲಿಸಿದ್ದನ್ನು ಗಮನಿಸಿದ್ದಾರೆ.

ವಾಹನಗಳಿಗೆ ಹೋಗಲು ದಾರಿ ಬಿಟ್ಟು ಗಾಡಿ ನಿಲ್ಲಿಸಿ ಎಂದು ತಿಳಿಸಿದ್ದಾರೆ. ಆದರೆ ವಾಹನ ಚಾಲಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ತಹಶೀಲ್ದಾರ್ ಎಡ ಕಣ್ಣಿಗೆ ಗುದ್ದಿ ಗಾಯಗೊಳಿಸಿದ್ದಾರೆ. ಅಲ್ಲದೇ ಗ್ರಾಮಲೆಕ್ಕಾಧಿಕಾರಿ ಕೊರಳು ಪಟ್ಟಿ ಹಿಡಿದು ಎಳೆದಾಡಿದ್ದಾರೆ. ಈ ಕುರಿತು ತಹಶೀಲ್ದಾರ್ ಕೆರೂರ ಠಾಣೆಯಗೆ ದೂರು ನಿಡಿದ್ದರಿಂದ ಕಾರ್ಯಾಚರಣೆಗಿಳಿದ ಪೊಲೀಸರು ಹಲ್ಲೆ ನಡೆಸಿದವರನ್ನು ಬಂಧಿಸಿದ್ದಾರೆ.

ಬಾದಾಮಿ ತಹಶೀಲ್ದಾರ್ ಸುಹಾಸ ಇಂಗಳೆ ಹಾಗೂ ಅವರ ಜತೆಯಲ್ಲಿದ್ದ ಹಲಕುರ್ಕಿ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ತೋಟಗೇರ ಹಲ್ಲೆಗೊಳಗಾದವರು.

ನೀರಬೂದಿಹಾಳ ಗ್ರಾಮದ ಲಾರಿ ಚಾಲಕಾರದ ನಾಗಪ್ಪ ಜಾನಮಟ್ಟಿ ಹಾಗೂ ಶಿವಾನಂದ ಜಾನಮಟ್ಟಿ ಅವರನ್ನು ಹಲ್ಲೆಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿ ಬುಧವಾರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ತಹಶೀಲ್ದಾರ್ ದೂರಿನ ಅನ್ವಯ ಕೆರೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here