ತಾಂತ್ರಿಕ ಶಿಕ್ಷಣ ಇನ್ನು ಕಾಲೇಜು ಶಿಕ್ಷಣ ವ್ಯಾಪ್ತಿಗೆ

0
207
Tap to know MORE!

ಬೆಂಗಳೂರು: ರಾಜ್ಯದ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಆಡಳಿತ ಮತ್ತು ಶೈಕ್ಷಣಿಕ ವಿಷಯಗಳನ್ನು ನಿರ್ವಹಿಸುತ್ತಿದ್ದ ತಾಂತ್ರಿಕ ಶಿಕ್ಷಣ ಇಲಾಖೆಯು ಇನ್ನು ಮುಂದೆ ಕಾಲೇಜು ಶಿಕ್ಷಣದ ವ್ಯಾಪ್ತಿಗೆ ಬರಲಿದೆ, ಈ ಎರಡೂ ಇಲಾಖೆಗಳಿಗೆ ಕಾರ್ಯಭಾರ ನೋಡಿಕೊಳ್ಳಲು ಒಬ್ಬರೇ ಆಯುಕ್ತರಿರುತ್ತಾರೆ.

ಈ ಸಂಬಂಧ ಸರಕಾರ ಮಂಗಳವಾರ ಅಧಿಕೃತ ಆದೇಶ ಹೊರಡಿಸಿದ್ದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಹುದ್ದೆಯನ್ನು ‘ಆಯುಕ್ತರು – ತಾಂತ್ರಿಕ ಮತ್ತು ಕಾಲೇಜು ಶಿಕ್ಷಣ’ ಎಂದು ಬದಲಿಸಲಾಗಿದೆ. ಅಲ್ಲದೇ ತಾಂತ್ರಿಕ ಶಿಕ್ಷಣ ಇಲಾಖೆಯ ಸಂಪೂರ್ಣ ಕಾರ್ಯಭಾರವನ್ನು ಆಯುಕ್ತರಿಗೆ ವಹಿಸಲಾಗಿದೆ ಎಂದು ಸರಕಾರ ಆದೇಶದಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here