ಇಂದಿನಿಂದ ಸಾರ್ವಜನಿಕರ ವೀಕ್ಷಣೆಗೆ ತಾಜ್ ಮಹಲ್ – ಪ್ರತಿದಿನ 5 ಸಾವಿರ ಪ್ರವಾಸಿಗರಿಗೆ ಮಾತ್ರ ಅವಕಾಶ!

0
208
Tap to know MORE!

ದೆಹಲಿ: ಕೊರೊನಾ ಹಾವಳಿಯಿಂದಾಗಿ ಆರು ತಿಂಗಳ ಕಾಲ ಮುಚ್ಚಿದ ಆಗ್ರಾದ ತಾಜ್ ಮಹಲ್ ಇಂದಿನಿಂದ ಮತ್ತೆ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಅಂದ ಹಾಗೇ ದಿನಕ್ಕೆ 5 ಸಾವಿರ ಪ್ರವಾಸಿಗರಿಗೆ ಮಾತ್ರ ತಾಜ್ ಮಹಲ್ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ.

ತಾಜ್‌ಮಹಲ್ ಅನ್ನು ಇಷ್ಟು ದೀರ್ಘಕಾಲದವರೆಗೆ ಮುಚ್ಚಿರುವುದು ಇದೇ ಮೊದಲು. ಆಗ್ರಾ ಕೋಟೆಯಲ್ಲಿ ಪ್ರತಿದಿನ 2,500 ಸಂದರ್ಶಕರಿಗೆ ಮಾತ್ರ ಅವಕಾಶ ನೀಡಲಾಗುವುದು. ಆಗ್ರಾದಲ್ಲಿನ ಇತರ ಎಲ್ಲಾ ಐತಿಹಾಸಿಕ ಸ್ಮಾರಕಗಳು ಈಗಾಗಲೇ ಸೆಪ್ಟೆಂಬರ್ 1 ರಿಂದ ಮತ್ತೆ ತೆರೆಯಲ್ಪಟ್ಟಿದ್ದಾವೆ.

ಪ್ರವಾಸಿಗರು ಒಂದೇ ಫೋಟೋಕ್ಲಿಕ್ಕಿಸಲು ಆರು ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಸೋಲೋ ಫೋಟೋಗಳಿಗೆ ಪೋಸ್ ನೀಡಲು ಅನುಮತಿ ನೀಡಲಾಗಿದೆ. ನಗದುರಹಿತ ವಹಿವಾಟಿಗೆ ಮಾತ್ರ ಅವಕಾಶ. ಆವರಣದೊಳಗೆ ಪರವಾನಗಿ ಪಡೆದ ಮಾರ್ಗದರ್ಶಿಗಳನ್ನು ಮಾತ್ರ ಅನುಮತಿಸಲಾಗುವುದು.

ತಾಜ್ ಮಹಲ್ ಶುಕ್ರವಾರ ಮತ್ತು ಭಾನುವಾರ ಮುಚ್ಚಲಿದೆ. ಆಗ್ರಾ ಕೋಟೆಯನ್ನು ಭಾನುವಾರ ಮಾತ್ರ ಮುಚ್ಚಲಾಗುತ್ತದೆ. ಜುಲೈ 6ರಿಂದ ಎಲ್ಲ ಎಎಸ್ ಐ ಸಂರಕ್ಷಿತ ಸ್ಮಾರಕಗಳನ್ನು ಪುನಃ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆದರೆ ಅಂತಿಮ ನಿರ್ಧಾರ ಸ್ಥಳೀಯ ಆಡಳಿತಗಳಿಗೆ ಬಿಟ್ಟದ್ದು.

LEAVE A REPLY

Please enter your comment!
Please enter your name here