ಸುತ್ತರಿದಿದೆ ಶಿಸ್ತಿಲ್ಲದ ತಾಣ
ತನು ಮಿಡುಕಲು ತುತ್ತಿಲ್ಲದ ಪ್ರಾಣ
ಸ್ಥಿತಿ ಕೊಂದಿದೆ ಸ್ತುತಿಗಳ ದಿನ
ಮಿತಿ ಇಲ್ಲದೆ ಕೊರಗುತಿರಲು ಜೀವನ
ಕಹಿ ಸಿಹಿಗಳ ಜಾತಿಯ ಪಾನ
ಮದ್ದೇರಿಸಿದೆ ಐಕ್ಯತೆ ಧ್ಯಾನ
ಸುಳಿವಿರದ ಸುಳಿಯಲಿ ಸಿಲುಕಿದ ಜನ
ಸ್ಥಿರ ತೊರೆದು ನಡುಗುತಿದೆ ನೊಂದ ಮನ
ಧ್ವನಿ ಸಮರ ತಲುಪಿದೆ ನೆತ್ತರ ತಾಣ
ಕೋವಿನ ಸದ್ದಲಿ ಕಿವಿಚಿದ ಮುಖ ಪ್ರಾಣನೆತ್ತರು ತುಂಬಿದ ಹಸ್ತಗಳ ಮುಂದೆ
ಬೇಡಿದೆ ಬದುಕಿನ ಆರೈಕೆ ಒಂದೇ
ಬದುಕಿನ ಸ್ಥಿತಿಯ ಕೊಂದೆ
ಸಾವಿನ ಸ್ಥಿತಿಯ ತಂದೆ
ತಿರುವಿನ ಕವಚ ನಾಯಕನೊಂದೆ ಕೊರಗಿನ ಜೀವಕೆಂದೆಕೂಗೊಂದು ನಿನಗಿಂದು
ಬೇಲಿಗಳ ತಾಣ ಜಾತಿಯ ಭವನ–ಪೆನಜ