ತಾಯಿಯ ಅಕ್ಕರೆ

0
277
Tap to know MORE!

ಅಮ್ಮ ನೀನು ನಕ್ಕರೆ ಬಾಯಿಗೆ ಸಕ್ಕರೆ
ಅಮ್ಮ ನಾನು ಅತ್ತರೆ ನಿನ್ನ ಕೈಗಳ ಅಕ್ಕರೆ
ನಾ ಭಯಗೊಂಡರು ನಿನ್ನ ಸೆರಗ ಆಸರೆ
ನಾ ಕನಸುಗಳು ನಿನ್ನ ಮಡಿಲ ಆಸರೆ

ಗುಲಾಬಿ ಎಷ್ಟೇ ಮುಳ್ಳಿದ್ದರೂ ನಗುವ ಹಾಗೆ
ನಿನಗೆ ಎಷ್ಟೇ ಕಷ್ಟವಿದ್ದರೂ ನಗುವ ನಗೆ
ಹರಿವ ಗಂಗಾಕಾವೇರಿ ಯಮುನಾ ತುಂಗೆ ಮಂಗಳದಲ್ಲಿ
ಕಂಡೆ ನಿನ್ನ ಮೊಗದ ಅಂಗಳದಲ್ಲಿ

ಗುರಿಯನ್ನು ಹೇಳಿಕೊಟ್ಟ ಮೊದಲ ಗುರು
ಜೀವನದಲ್ಲಿ ಕನಸನ್ನು ಚಿಗುರಿಸಿದ ದೇವರು
ನೀನೆ ನನಗೆ ಉಸಿರಿಗೆ ಉಸಿರು ಇರಲಿ ನಿನ್ನ ಮೊಗ ಎಂದು ಹಸಿರು

ನಿನ್ನಿಂದ ಜಗವೆಂಬ ಜ್ಯೋತಿಯ ದರ್ಶನ
ನಿನ್ನಿಂದ ಅಮೂಲ್ಯ ಜೀವನ ಆರಿಲ್ಲ ನೀ ಕೊಟ್ಟ ಸಿಹಿ ಚುಂಬನ ಮರೆತಿಲ್ಲ ಹೇಳಿಕೊಟ್ಟ ಹನಿಗವನ

ಕೈ ತುತ್ತು ಕೊಟ್ಟು ಮುತ್ತು ಕೊಡುವ ಮಾತೆ
ಪದಗಳೇ ಸಾಲದು ನಿನ್ನ ಬಗ್ಗೆ ಬರೆಯಲು ಕವಿತೆ
ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವತೆ ನೀ ಮಮತೆ ಎಂಬ ಕಾಂತಿಯುಳ್ಳ ಹಣತೆ

ನಾ ಸೋತರೆ ಗೆಲುವಿನ ಸೂತ್ರ ತಿಳಿಸಿದೆ
ನಾ ಅತ್ತರೆ ನಗುವಿನ ತಂತ್ರದಿಂದ ನಗಿಸಿದೆ
ಭುವಿಗೆ ಚಂದ್ರಮನ ಬೆಳಕೇ ಸುಂದರ
ಮಾತೇ ನನಗೆ ನಿನ್ನ ಮಾತೇ ಇಂಚರ

-ಗಿರೀಶ್ ಪಿ.ಎಂ,

LEAVE A REPLY

Please enter your comment!
Please enter your name here