ರೈತರ ಪ್ರತಿಭಟನೆ: ತಿದ್ದುಪಡಿ ತರಲು ಸರ್ಕಾರ ಒಪ್ಪಿಗೆ | ಕಾಯ್ದೆಗಳನ್ನೇ ರದ್ದುಗೊಳಿಸಲು ರೈತರ ಒತ್ತಾಯ |ಡಿ.9ರಂದು ಮುಂದಿನ ಸಭೆ

0
169
Tap to know MORE!

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 11 ದಿನಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 10 ನೇ ದಿನವಾದ ಶನಿವಾರ ರೈತರು ಹಾಗೂ ಸರ್ಕಾರದ ನಡುವೆ ಮಾತುಕತೆ ನಡೆದಿದ್ದು ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿ ಮಾಡಲಾಗಿದೆ.

ಸರ್ಕಾರ ಕೆಲವೊಂದು ತಿದ್ದುಪಡಿ ಮಾಡುವುದಕ್ಕೆ ಒಪ್ಪಿಕೊಂಡಿದ್ದರೂ ರೈತರು ಮಾತ್ರ ಈ ಕಾಯ್ದೆಯನ್ನೇ ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ. ಹಾಗೆಯೇ ಸಭೆಯ ಕೊನೆಯಲ್ಲಿ ರೈತರು ಮೌನ ಪ್ರತಿಭಟನೆ ನಡೆಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ರೈತರು ಹೌದು ಅಥವಾ ಅಲ್ಲ ಎಂದು ಹೇಳುವ ಫಲಕಗಳನ್ನು ಹಿಡಿದುಕೊಂಡು ಸಭೆಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ರೈತರ ಪ್ರತಿಭಟನೆಗೆ ಬೆಂಬಲ – ಪದ್ಮವಿಭೂಷಣ ಪುರಸ್ಕಾರವನ್ನು ಹಿಂತಿರುಗಿಸಿದ ಮಾಜಿ ಮುಖ್ಯಮಂತ್ರಿ!

ಕೇಂದ್ರದ ಮೂರು ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಿಲ್ಲದು, ಡಿಸೆಂಬರ್ 8 ರಂದು ಭಾರತ ಬಂದ್‌ ಇದೆ. ಆದ್ದರಿಂದ 9ರಂದು ಸಭೆ ನಡೆಯಲಿದೆ” ಎಂದು ಭಾರತೀಯ ಕಿಸಾನ್ ಸಂಘದ ನಾಯಕ ಬೂಟಾ ಸಿಂಗ್ ತಿಳಿಸಿದ್ದಾರೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

LEAVE A REPLY

Please enter your comment!
Please enter your name here