ತಿರುಪತಿ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕರು ಕೊರೋನಾ ಸೋಂಕಿಗೆ ಬಲಿ

0
198
Tap to know MORE!

ಪ್ರಸಿದ್ಧ ಭಗವಾನ್ ವೆಂಕಟೇಶ್ವರ ದೇವಸ್ಥಾನವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ) ನ ಮಾಜಿ ಪ್ರಧಾನ ಅರ್ಚಕರು ಇಂದು, ತಿರುಮಲದಲ್ಲಿರುವ ಕೋವಿಡ್ ಆರೈಕೆ ಕೇಂದ್ರವೊಂದರಲ್ಲಿ ಕೊರೋನವೈರಸ್‌ನಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಿಟಿಡಿಯ ಮಾಜಿ ಪ್ರಧಾನ ಅರ್ಚಕರಾದ ಶ್ರೀನಿವಾಸಮೂರ್ತಿ ದೀಕ್ಷಿತುಲು (73) ಅವರು ಇಂದು ಮುಂಜಾನೆ ವೈರಸ್‌ಗೆ ಬಲಿಯಾಗಿದ್ದಾರೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಅವರು ಮೂರು ದಶಕಗಳಿಗಿಂತ ಹೆಚ್ಚು ಕಾಲ ಟಿಟಿಡಿಗೆ ಸೇವೆ ಸಲ್ಲಿಸಿದ್ದರು.

ಎಸ್‌ವಿಐಎಂಎಸ್ ನ ನಿರ್ದೇಶಕ ಡಾ.ಬಿ.ವೆಂಗಮ್ಮ ಅವರ ಪ್ರಕಾರ, ಅರ್ಚಕರು ಮಧುಮೇಹ ಮತ್ತು ಮೂತ್ರಪಿಂಡ ಸಂಬಂಧಿತ ಕಾಯಿಲೆಗಳನ್ನು ಹೊಂದಿದ್ದರು.

ಶ್ರೀನಿವಾಸ ಮೂರ್ತಿ ಅರ್ಚಕಂ ಪೆದ್ದಿಂಟಿ ಕುಟುಂಬಕ್ಕೆ ಸೇರಿದವರಾಗಿದ್ದು, ತಿರುಮಲ ದೇವಸ್ಥಾನಕ್ಕೆ ಶತಮಾನಗಳಿಂದ ಸಂಬಂಧ ಹೊಂದಿದ್ದ ಆನುವಂಶಿಕ ಪುರೋಹಿತರ ನಾಲ್ಕು ಕುಟುಂಬಗಳಲ್ಲಿ ಒಂದಾಗಿದೆ. ಅವರು ಸುಮಾರು ಮೂರು ದಶಕಗಳ ಕಾಲ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here