ತಿರುಪತಿ ದೇವಾಲಯದ ಎದುರು ಭಿಕ್ಷೆ ಬೇಡುತ್ತಿದ್ದ ಭಿಕ್ಷುಕ ಮಿಲಿಯನೇರ್..!

0
197
Tap to know MORE!

ತಿರುಪತಿ ತಿರುಮಲ ದೇವಾಲಯದ ಎದುರು ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ಮನೆಯಲ್ಲಿ ಬರೋಬ್ಬರಿ 10 ಲಕ್ಷ ರೂ. ಪತ್ತೆಯಾಗಿದೆ. ಶೇಷಾಚಲ ನಗರದಲ್ಲಿ ಮನೆಯಲ್ಲಿ ವಾಸಿಸುತ್ತಿದ್ದ ಭಿಕ್ಷುಕ ಶ್ರೀನಿವಾಸ್ ಆಚಾರಿ ಮನೆಯಲ್ಲಿ ಲಕ್ಷ ಲಕ್ಷ ರೂಪಾಯಿ ಪತ್ತೆಯಾಗಿರುವುದು.

ಶ್ರೀನಿವಾಸ್ ಆಚಾರಿ ಕಳೆದ ವರ್ಷ ಅನಾರೋಗ್ಯದಿಂದ ಮೃತಪಟ್ಟಿದ್ದ. ಈತನಿಗೆ ಕುಟುಂಬ ಸದಸ್ಯರು ಯಾರು ಇರಲಿಲ್ಲ. ಹೀಗಾಗಿ ಯಾವುದೇ ವಾರೀಸುದಾರರು ಇಲ್ಲದ ಹಿನ್ನಲೆಯಲ್ಲಿ ಟಿಟಿಡಿ ಅಧಿಕಾರಿಗಳು ಇತ್ತೀಚಿಗೆ ಈತನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಆತ ಮಿಲಿಯನರ್ ಆಗಿರುವ ಸತ್ಯ ಬೆಳಕಿಗೆ ಬಂದಿದೆ.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಭಿಕ್ಷುಕ ಶ್ರೀನಿವಾಸನಿಗೆ ತಿರುಪತಿ ವಲಸಿಗ ಕ್ಯಾಟಗರಿ ಅಡಿಯಲ್ಲಿ ಶೇಷಾಚಲ ನಗರದಲ್ಲಿ ಮನೆಯೊಂದನ್ನು ಟಿಟಿಡಿ ಮಂಜೂರು ಮಾಡಿತ್ತು. ಈತ ಪ್ರತಿ ನಿತ್ಯ ತಿರುಪತಿ ದೇವರ ದರ್ಶನ ಪಡೆಯಲು ಬರುತ್ತಿದ್ದವರ ಬಳಿ ಭಿಕ್ಷೆ ಬೇಡುತ್ತಿದ್ದನು. ಭಿಕ್ಷೆಯಿಂದ ಸಂಗ್ರಹಿಸಿದ ದುಡ್ಡಿನಲ್ಲಿ ಖರ್ಚು ಮಾಡಿ ಉಳಿಸಿದ ಹಣವನ್ನು ಹೀಗೆ ಟ್ರಂಕ್ ನಲ್ಲಿ ಸಂಗ್ರಹಿಸಿಡುತ್ತಿದ್ದ ಎನ್ನಲಾಗಿದೆ.

LEAVE A REPLY

Please enter your comment!
Please enter your name here