ತೋಕೂರು : “ಸ್ಪೋರ್ಟ್ಸ್ ಕ್ಲಬ್ ನಲ್ಲಿ ತುಡರ್ ಪರ್ಬ -2020” ಆಚರಣೆ

0
176
Tap to know MORE!

ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ತೋಕೂರು ಹಳೆಯಂಗಡಿ ಇದರ ಸಂಯೋಜನೆಯಲ್ಲಿ ತುಳುನಾಡ ತುಡರ್ ಪರ್ಬ -2020 ಕಾರ್ಯಕ್ರಮವು ಭಾನುವಾರ ಸಂಜೆ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ)ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ನರೇಶ್ ಕುಮಾರ್ ಸಸಿಹಿತ್ಲು ವಹಿಸಿದ್ದರು. ಇವರು , ಧರ್ಮವು ಒಂದು ರಕ್ಷಾ ಕವಚವಿದ್ದಂತೆ, ನಮ್ಮಲ್ಲಿರುವ ಉತ್ತಮ ಸಂಸ್ಕಾರದಿಂದ ಧರ್ಮ ಬೆಳಗಲು ಸಾಧ್ಯ. ಹಾಗೂ ತುಳುನಾಡ ಬಲಿಂದ್ರ ಪೂಜೆಯ ಹಿನ್ನಲೆ ಮತ್ತು ಮಹತ್ವದ ಬಗ್ಗೆ ಮಾತನಾಡಿದರು.

ಇದನ್ನೂ ಓದಿ: ತೋಕೂರು : ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ಮಾಹಿತಿ ಕಾರ್ಯಾಗಾರ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ದಿವಾಕರ್ ಕರ್ಕೇರ ಅವರು ಧರ್ಮವು ಮಾನವನ ಜೀವನವನ್ನು ಶಾಂತಿಯಿಂದ ಮುನ್ನಡೆಸಲು ಸಹಾಯವಾಗಿದ್ದು ಎಲ್ಲರೂ ತನ್ನವರೆಂಬ ಭಾವನೆಯಿಂದ ಬಾಳಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಸಂಸ್ಥೆಯ ಮಹಿಳಾ ಸದಸ್ಯೆಯರಿಗೆ ಏರ್ಪಡಿಸಲಾದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ, ದ್ವಿತೀಯ, ಹಾಗೂ ಸಮಾಧಾನಕರ ಬಹುಮಾನ ವಿತರಣೆಯನ್ನು ಎನ್‌ಐಟಿಕೆ ಸಿಬ್ಬಂದಿ ಶ್ರೀ ರಾಜೇಶ್ ದೇವಾಡಿಗ ಇವರು ವಿತರಿಸಿದರು.

ಶ್ರೀ ಸುಹಾಸ್ ನಾನಿಲ್, ಕಲಾ ಶಿಕ್ಷಕರು,ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ,ಸುರತ್ಕಲ್, ಶ್ರೀಮತಿ ಪ್ರತಿಮಾ ಗಣೇಶ್ ಆಚಾರ್ಯ,ಉಪನ್ಯಾಸಕರು, ಸರಕಾರಿ ಪದವಿ ಪೂರ್ವ ಕಾಲೇಜು,ಕೃಷ್ಣಾಪುರ, ಸುರತ್ಕಲ್ ಇವರು ಅತಿಥಿಗಳಾಗಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷರು ಶ್ರೀ ನಾರಾಯಣ ಜಿ ಕೆ, ಅಧ್ಯಕ್ಷರು ಶ್ರೀ ಸಂತೋಷ್ ದೇವಾಡಿಗ, ಮಹಿಳಾ ಸಮಿತಿ ಕಾರ್ಯಧ್ಯಕ್ಷೆ ಶ್ರೀಮತಿ ವಾಣಿ ಮಹೇಶ್ ಉಪಸ್ಥಿತರಿದ್ದರು.

ಮಹಿಳಾ ಸಮಿತಿ ಸದಸ್ಯೆಯರಾದ ಶ್ರೀಮತಿ ಜ್ಯೋತಿ ಕುಲಾಲ್,ಶ್ರೀಮತಿ ಶೋಭಾ ವರುಣ್ ಅಂಚನ್ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮದಲ್ಲಿ ಗೋವು ಪೂಜೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ನೆರವೇರಿಸಲಾಯಿತು.

ಸಂಸ್ಥೆಯ ಅಧ್ಯಕ್ಷರು ಶ್ರೀ ಸಂತೋಷ್ ದೇವಾಡಿಗ ಸ್ವಾಗತಿಸಿ, ಕಾರ್ಯದರ್ಶಿ ಶ್ರೀ ಜಗದೀಶ್ ಕುಲಾಲ್ ವಂದಿಸಿದರು. ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here