ತುಳಸಿ ಗಿಡದ ಕಳ್ಳರೂ ಇದ್ದಾರೆ..!!!

0
194
Tap to know MORE!

ನವದೆಹಲಿ: ಚಿನ್ನ ಅಥವಾ ಬೆಲೆಬಾಳುವ ವಸ್ತುಗಳು ಕಳ್ಳತನವಾಗುವುದು ಸಾಮಾನ್ಯ. ಆದರೆ ಗಿಡಮೂಲಿಕೆಗಳನ್ನು ಕದಿಯುವವರು ಇದ್ದಾರೆಂದರೆ ಆಶ್ಚರ್ಯಕರ ವಿಷಯ. ಅಚ್ಚರಿಯಾದರೂ ಇದು ಸತ್ಯದ ಸಂಗತಿ.

ಈ ಪ್ರಕರಣಗಳು ಇತ್ತೀಚೆಗೆ ಹರಿಯಾಣ ಮತ್ತು ಚಂಡಿಗಡಗಳಲ್ಲಿ ನಿರಂತರವಾಗಿ ವರದಿಯಾಗುತ್ತಿದೆ. ಇಲ್ಲಿ ಕಳವಾಗುತ್ತಿರುವುದು ತುಳಸಿ ಗಿಡಗಳು..! ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಜನರು ಔಷಧೀಯ ಸಸ್ಯಗಳು, ಗಿಡಮೂಲಿಕೆಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಕಾರಣಕ್ಕೆ ತುಳಸಿ ಗಿಡಗಳನ್ನು ಕದಿಯಲಾಗುತ್ತಿದೆ.

ಚಂಡಿಗಡ, ಫರೀದಾಬಾದ್, ಕರ್ನಾಲ್, ಹಿಸಾರ್ ಮತ್ತು ಗುರುಗ್ರಾಮಗಳಲ್ಲಿ ತುಳಸಿ ಕಳ್ಳತನ ಹೆಚ್ಚಾಗಿ ನಡೆಯುತ್ತಿದೆ. ಮೊದಮೊದಲು ನೆರೆಮನೆಯವರಲ್ಲಿ ತುಳಸಿ ಎಲೆ ಪಡೆಯುತ್ತಿದ್ದರೆ, ಇತ್ತೀಚೆಗೆ ತುಳಸಿ ಗಿಡಗಳನ್ನೇ ಲಪಟಾಯಿಸುತ್ತಿರುವುದು ಬೆಳಕಿಗೆ ಬಂದಿದೆ. ನರ್ಸರಿಗಳಲ್ಲೂ ತುಳಸಿ ಗಿಡಕ್ಕೆ ಬೇಡಿಕೆ ಹೆಚ್ಚಿದ್ದು, ಗಿಡವೊಂದಕ್ಕೆ 250ರೂ. ನಿಗದಿಪಡಿಸಲಾಗಿದೆ.

LEAVE A REPLY

Please enter your comment!
Please enter your name here