ತುಳುನಾಡಿನ ಆಚರಣೆ : ಶಾಸಕರ ಕೋರಿಕೆಗೆ ಸಿಎಂ ಒಪ್ಪಿಗೆ

0
356
Tap to know MORE!

ತುಳುನಾಡಿನ ವಿಶಿಷ್ಟ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳಾದ ದೈವಾರಾಧನೆ, ನೇಮೋತ್ಸವ, ಮಾರಿ ಪೂಜೆ ಇತ್ಯಾದಿಗಳ ಆಚರಣೆಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿಯವರನ್ನು ಉಡುಪಿ ಶಾಸಕ ರಘುಪತಿ ಭಟ್‌ರವರು ಒತ್ತಾಯಿಸಿದ್ದರು. ಅದರಂತೆ, ಅವರ ಮನವಿಗೆ ಸ್ಪಂದಿಸಿದ ಯಡಿಯೂರಪ್ಪ, ಆಚರಣೆಗೆ ಒಪ್ಪಿಗೆ ನೀಡಿದ್ದಾರೆ.

ಕೊರೋನವೈರಸ್ ಸೋಂಕಿನಿಂದಾಗಿ, ಮಾರ್ಚ್ ತಿಂಗಳಿನಿಂದ ರಾಷ್ಟ್ರಾದ್ಯಂತ ಲಾಕ್‌ಡೌನ್ ಹೇರಲಾಗಿತ್ತು. ಇದರಿಂದಾಗಿ ಆರ್ಥಿಕ ಚಟುವಟಿಕೆಗಳು ಸೇರಿದಂತೆ ಎಲ್ಲಾ ಧಾರ್ಮಿಕ ಉತ್ಸವಗಳು ಮತ್ತು ಆಚರಣೆಗಳನ್ನು ಮಾಡಲೂ ಸಹ ಸಾಧ್ಯವಾಗಲಿಲ್ಲ. ಹಲವು ಸಂಪ್ರದಾಯಗಳು ವಾರ್ಷಿಕ ಆಧಾರದ ಮೇಲೆ ನಡೆಸಲಾಗುತ್ತದೆ. ಈ ಬಾರಿ ಮಾರ್ಚ್ ತಿಂಗಳಿನಿಂದ ಯಾವುದೇ ಆಚರಣೆಗಳು ನಡೆಯದೇ ಇದ್ದಿದ್ದರಿಂದ, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಮತ್ತು ಈ ಆಚರಣೆಗಳ ಸಂದರ್ಭದಲ್ಲಿ, ವಿವಿಧ ಸೇವೆ ಮತ್ತು ಚಟುವಟಿಕೆಗಳನ್ನು ಮಾಡುವ ಮೂಲಕ, ತಮ್ಮ ಜೀವನ ಸಾಗಿಸುವ ಹಲವಾರು ಜನರ ಆರ್ಥಿಕ ಸ್ಥಿತಿ ಬಹಳ ದುರ್ಬಲವಾಗಿದೆ ಎಂದು ಭಟ್ ಮುಖ್ಯಮಂತ್ರಿಗೆ ವಿವರಿಸಿದ್ದರು.

ಇದನ್ನೂ ಓದಿ : ತುಳುವಿನಲ್ಲಿ ಸಿಗಲಿ ಮಾತೃಭಾಷಾ ಶಿಕ್ಷಣ

ಬೇಡಿಕೆಯಂತೆ, ಅಂತಹ ಪ್ರತಿಯೊಂದು ಆಚರಣೆಗೆ ಅನುಮತಿ ನೀಡಿರುವ ಮುಖ್ಯಮಂತ್ರಿ, 100ಕ್ಕೂ ಅಧಿಕ ಮಂದಿ ಸೇರಬಾರದು ಎಂಬ ಷರತ್ತು ಹಾಕಿ ಅನುಮತಿ ನೀಡಿದ್ದಾರೆ. ಧಾರ್ಮಿಕ ಸೇವೆ ಮಾಡುವ ನಿರ್ದಿಷ್ಟ ವರ್ಗದ ಜನರಿಗೆ, ಆಚರಣೆ ನಡೆಸಿ ಕೊಡಲು ₹10,000 ರೂ. ಗಳ ಆರ್ಥಿಕ ನೆರವು ನೀಡುವ ಭರವಸೆ ನೀಡಿದರು.

ಮುಖ್ಯಮಂತ್ರಿಗಳು ನಮ್ಮ ಮನವಿಯನ್ನು ಎತ್ತಿಹಿಡಿದಿದ್ದಾರೆ ಮತ್ತು ಆಚರಣೆಗಳಿಗೆ ಅನುಮತಿ ನೀಡುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಶೀಘ್ರದಲ್ಲಿಯೇ ಅನುಮತಿ ನೀಡುವಂತೆ ಅವರು ಮುಖ್ಯ ಕಾರ್ಯದರ್ಶಿಯನ್ನು ಕೋರಿದ್ದಾರೆ.

LEAVE A REPLY

Please enter your comment!
Please enter your name here