ತುಳು ಭಾಷೆಗೆ ರಾಜ್ಯ ಮಾನ್ಯತೆ ನೀಡುವಂತೆ ಒತ್ತಾಯಿಸಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕತ್ತಲ್‌ಸಾರ್

1
207
ತುಳು, ಭಾಷೆ, ಮಾನ್ಯತೆ
Tap to know MORE!

ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ್ ಕತ್ತಲ್ಸರ್, ಸದಸ್ಯೆ ಕಾಂತಿ ಶೆಟ್ಟಿ ಮತ್ತು ಮಾಜಿ ಸದಸ್ಯ ಪುರುಷೋತ್ತಮ್ ಚೆಂಡ್ಲಾ ಅವರು ಸೋಮವಾರ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಅವರನ್ನು ಭೇಟಿ ಮಾಡಿ ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಗುರುತಿಸುವಂತೆ ರಾಜ್ಯ ಸರ್ಕಾರವನ್ನು ಕೋರಿದ್ದಾರೆ.

ಕಳೆದ ವರ್ಷ ಜನವರಿಯಲ್ಲಿ, ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆಯನ್ನು ಸೇರಿಸಬೇಕೆಂದು ಒತ್ತಾಯಿಸಿ, ತುಳುನಾಡ ರಕ್ಷಣಾ ವೇದಿಕೆ ಮತ್ತು ‘ಕಲಾವಿದರ ಘಟಕಾ’ ಕೂಡ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಆಂದೋಲನವನ್ನು ಆಯೋಜಿಸಿತ್ತು.

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ – ತುಳು ಪತ್ರಿಕೆಯಲ್ಲಿ ಶೇ.99 ವಿದ್ಯಾರ್ಥಿಗಳು ಪಾಸ್!

ತುಳು ಭಾಷೆಯು ಸುಮಾರು 2,000 ವರ್ಷಗಳ ಇತಿಹಾಸ ಇರುವ ಪ್ರಾಚೀನ ಭಾಷೆ. ಅದು ಮೂಲ-ದ್ರಾವಿಡ ಭಾಷೆಯಿಂದ ಸ್ವತಂತ್ರವಾಗಿ ಕವಲೊಡೆದ ಭಾಷೆಯಾಗಿದೆ. ಇದು ಕರ್ನಾಟಕದ ಎರಡನೇ ಅತಿದೊಡ್ಡ ಭಾಷೆಯಾಗಿದೆ.

ಇದನ್ನೂ ಓದಿ ತುಳು ಭಾಷೆಯಲ್ಲೂ ಸಿಗಲಿ ಮಾತೃಭಾಷೆ ಶಿಕ್ಷಣ

ಏತನ್ಮಧ್ಯೆ, ರಾಜಕೀಯ ಪಕ್ಷಗಳು ಮತ್ತು ಚುನಾಯಿತ ಪ್ರತಿನಿಧಿಗಳು ರಾಷ್ಟ್ರೀಯ ಮಟ್ಟದಲ್ಲಿ ತುಳು ಭಾಷೆಯನ್ನು ಉತ್ತೇಜಿಸಲು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತುಳು ಭಾಷೆಗೆ ಮಾನ್ಯತೆ ನೀಡುವ ಆಂದೋಲನವನ್ನು ಬೆಂಬಲಿಸುವವರು ಹೇಳಿದ್ದಾರೆ.

1 COMMENT

LEAVE A REPLY

Please enter your comment!
Please enter your name here