ಹಳೆಯಂಗಡಿ : “ಬಲೆ ತುಳು ಲಿಪಿ ಕಲ್ಪುಗ” ಕಾರ್ಯಾಗಾರಕ್ಕೆ ಚಾಲನೆ

0
263
Tap to know MORE!

ಹಳೆಯಂಗಡಿ :- ಮೂರು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿರುವ “ಬಲೆ ತುಳು ಲಿಪಿ ಕಲ್ಪುಗ” ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.

ಶ್ರೀ ವಿದ್ಯಾವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ಇದರ “ಸುವರ್ಣ ಮಹೋತ್ಸವದ ಅಂಗವಾಗಿ” ನಡೆಸುತ್ತಿರುವ ವಿವಿಧ ಕಾರ್ಯಕ್ರಮಗಳ ಸಲುವಾಗಿ “ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ” ಮತ್ತು ಜೈ ತುಳುನಾಡು (ರಿ) ಇದರ ಸಹಕಾರದಲ್ಲಿ “ಬಲೆ ತುಳು ಲಿಪಿ ಕಲ್ಪುಗ” ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ಅಕ್ಟೋಬರ್ 18ರ ಭಾನುವಾರ ಯುವಕ ಮಂಡಲದ ಸಭಾಂಗಣದಲ್ಲಿ ಜರುಗಿತು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ ಕತ್ತಲ್‌ಸಾರ್, ತುಳು ಭಾಷೆಯು ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಅಲ್ಲದೆ ಭಾರತದ ಪ್ರಾಚೀನ ಭಾಷೆಗಳಲ್ಲೊಂದು ಎಂಬ ಸ್ಥಾನವನ್ನು ಪಡೆದಿದೆ ಎಂದು ತುಳು ಬಾಷೆಯ ಇತಿಹಾಸದ ಬಗ್ಗೆ ಸವಿಸ್ತಾರವಾಗಿ ಮಾತನಾಡುತ್ತ, ತುಳು ಲಿಪಿ ಕಲಿಕೆಯ ಬಗ್ಗೆ ಅನೇಕೆ ತುಳುವರ ಸಂಘಟನೆಗಳು ಕಳೆದ ಹಲವಾರು ವರ್ಷಗಳಲ್ಲಿ ದುಡಿಯುತ್ತಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಕೂಡ ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು ತುಳು ಭಾಷೆಯು ಎಂಟನೇ ಪರಿಚ್ಛೇದದಲ್ಲಿ ಸೇರಿಸುವಲ್ಲಿ ಅಕಾಡೆಮಿ ಮತ್ತು ಸಂಘಟನೆಗಳೊಂದಿಗೆ ಎಲ್ಲಾ ಸಂಸ್ಥೆಗಳು ಕೈ ಜೋಡಿಸಬೇಕು ಎಂದು ಹೇಳಿದರು.

“ಬಲೆ ತುಳು ಲಿಪಿ ಕಲ್ಪುಗ” ಕಾರ್ಯಾಗಾರದ ಉದ್ಘಾಟನೆಯನ್ನು ನಮ್ಮ ಟಿವಿ ಚಾನಲ್‌ನ ನಿರೂಪಕರು, ಬಲೆ ತೆಲಿಪಾಲೆ ಖ್ಯಾತಿಯ ಶ್ರೀ ನವೀನ್ ಶೆಟ್ಟಿ ಎಡ್ಮೇಮಾರ್ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಸದಸ್ಯರು ಹಾಗೂ ಪತ್ರಕರ್ತರಾಗಿರುವ ಶ್ರೀ ನರೇಂದ್ರ ಕೆರೆಕಾಡು, ಹಾಗೂ ಜೈ ತುಳುನಾಡು (ರಿ) ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುದರ್ಶನ ಸುರತ್ಕಲ್, ನೆಹರೂ ಯುವ ಕೇಂದ್ರ ಮಂಗಳೂರು ಇದರ ಜಿಲ್ಲಾ ಯುವ ಸಮನ್ವಯಾಧಿಕಾರಿ ಶ್ರೀ ರಘುವೀರ್ ಸೂಟರ್ ಪೇಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಶ್ರೇಷ್ಠ ತುಳು ಭಾಷ ನಿರೂಪಕರಾದ ಶ್ರೀ ನವೀನ್ ಶೆಟ್ಟಿ ಇವರು ತಾವು ನಡೆದುಬಂದ ದಾರಿಯನ್ನು ನೆನಪಿಸುತ್ತ, ತಮ್ಮ ಜೀವನದಲ್ಲಿ ಅನೇಕ ಮೈಲುಗಲ್ಲುಗಳನ್ನು ಸಾಧಿಸುವಂತೆ ಆಗಿದೆ ಅಂದರೆ ಅದು ತುಳು ಭಾಷೆಯಿಂದ. ಈ ತುಳು ಭಾಷೆಯನ್ನು ಉಳಿಸಿ ಬೆಳೆಸುವಂತಹ ಕಾರ್ಯಾಗಾರಗಳು ಮುಂದಿನ ದಿನಗಳಲ್ಲಿ ಕೂಡ ಹೆಚ್ಚೆಚ್ಚು ನಡೆಸಬೇಕು ಎಂದರು. ಈ ಸಂದರ್ಭ, ಯುವಕ ಮಂಡಲವು ಆಯೋಜಿಸಿದ ಕಾರ್ಯಗಾರವನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರಾಗಿ ಆಯ್ಕೆಯಾಗಿರುವ ಎಲ್ಲಾ ಅತಿಥಿಗಳಿಗೆ ಹಾಗೂ ತುಳು ಭಾಷೆ ಉಳಿವಿಗಾಗಿ ಸಂಘಟನೆಯನ್ನು ನಡೆಸಿಕೊಂಡು ಅನೇಕ ಕಾರ್ಯಾಗಾರವನ್ನು ನಡೆಸಿಕೊಂಡು ಬಂದಿರುವ ಎಲ್ಲಾ 5 ಅತಿಥಿ ಗಣ್ಯರನ್ನು ಸಂಸ್ಥೆಯ ಪರವಾಗಿ ಗೌರವಪೂರ್ಣವಾಗಿ ಅಭಿನಂದಿಸಲಾಯಿತು.

ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ತುಳುಭಾಷೆಗೆ ಬೇಕಾಗಿ ಎಲ್ಲಾ ರೀತಿಯ ಸಹಕಾರವನ್ನು ಅಕಾಡೆಮಿ ಮತ್ತು ಸಂಘಟನೆಗಳಿಗೆ ನೀಡುವುದಲ್ಲದೆ, ಕಾರ್ಯಾಗಾರದ ನಡೆಸಿದ ಬಗ್ಗೆ ಮೆಚ್ಚುಗೆಯನ್ನು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಸದಸ್ಯರಾಗಿರುವ ಶ್ರೀ ನಾಗೇಶ್ ಕುಲಾಲ್ ಹಾಗೂ ಶ್ರೀ ನರೇಂದ್ರ ಕೆರೆಕಾಡು ವ್ಯಕ್ತಪಡಿಸಿದರು.

ಕಾರ್ಯಾಗಾರದ ಬಗ್ಗೆ ಪ್ರಸ್ತಾವಿಕ ಮಾತನ್ನು ಜೈ ತುಳುನಾಡು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುದರ್ಶನ್ ಸುರತ್ಕಲ್ ಸವಿಸ್ತಾರವಾಗಿ ತಿಳಿಯಪಡಿಸಿದರು.

Suddivani, ತುಳು ಲಿಪಿ , ಹಳೆಯಂಗಡಿ

Suddivani, ತುಳು ಲಿಪಿ, ಹಳೆಯಂಗಡಿ

Suddivani, ತುಳು ಲಿಪಿ, ಹಳೆಯಂಗಡಿ

ವೇದಿಕೆಯಲ್ಲಿ ಸುವರ್ಣ ಮಹೋತ್ಸವ ಸಮಿತಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಗೌರವ ಅಧ್ಯಕ್ಷರಾದ ಶ್ರೀ ಪ್ರಕಾಶ್ ಏನ್ ಶೆಟ್ಟಿ, ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್, ಸುವರ್ಣ ಮಹೋತ್ಸವ ಸಮಿತಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಕಾರ್ಯಾಧ್ಯಕ್ಷರಾದ ಶ್ರೀ ಸುಧಾಕರ ಆರ್ ಅಮೀನ್, ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಸದಾಶಿವ ಅಂಚನ್ ಚಿಲಿಂಬಿ, ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಅಶ್ರಫ್ ಉಪಸ್ಥಿತರಿದ್ದರು. ಜಂಟಿ ಸಂಸ್ಥೆಯ ಸದಸ್ಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಯುವಕ ಮಂಡಲದ ಸದಸ್ಯರಾದ ಶ್ರೀ ಕಿರಣ್ ರಾಜ್ ಬಿ ಪ್ರಾರ್ಥನೆಯನ್ನು ನೆರವೇರಿಸಿದರು. ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಯತೀಶ್ ಕೋಟ್ಯಾನ್ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಮದಾಸ್ ಪಾವಂಜೆ ನಿರೂಪಿಸಿದರು. ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಇಂದುಧರ್ ಕಿಣಿ ಧನ್ಯವಾದ ಸಮರ್ಪಿಸಿದರು.

ಮುಂದಿನ ಪ್ರತಿ ಭಾನುವಾರ ಈ ಕಾರ್ಯಾಗಾರದ ಮುಂದುವರಿದ ಅಂಗವಾಗಿ ತುಳು ಲಿಪಿ ಕಲಿಕೆಯ ತರಗತಿಗಳು ಯುವಕ ಮಂಡಲದಲ್ಲಿ ನಡೆಯಲಿವೆ.

LEAVE A REPLY

Please enter your comment!
Please enter your name here