ತುಳು ಲಿಪಿಯಲ್ಲಿ ಮೂಡಿ ಬರುತ್ತಿದೆ ಶಾಸಕ, ಕಾರ್ಪೊರೇಟರ್‌ಗಳ ನಾಮಫಲಕಗಳು!

0
223
Tap to know MORE!

ಮಂಗಳೂರು: ದಕ್ಷಿಣ ಕನ್ನಡ – ಉಡುಪಿ ಆದ್ಯಂತ ತುಳು ಲಿಪಿಯ ಕಲಿಕೆ, ಪ್ರೋತ್ಸಾಹ ಎಲ್ಲವೂ ಭರದಿಂದ ಸಾಗುತ್ತಿದೆ. ಲಾಕ್‌ಡೌನ್ ಸಮಯದಲ್ಲೂ ಆನ್ಲೈನ್ ಮೂಲಕ ಕೆಲ ಸಂಘ ಸಂಸ್ಥೆಗಳು ತರಬೇತಿಯನ್ನು ನೀಡಿವೆ. ಸಂವಿಧಾನದ ೮ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸಲು ಎಲ್ಲಾ ರೀತಿಯ ಪ್ರಯತ್ನಗಳೂ ಆಗುತ್ತಿವೆ. ಅದಕ್ಕೆ ಪುಷ್ಟಿ ಎಂಬಂತೆ ಪ್ರದೇಶದ ಶಾಸಕರು – ಕಾರ್ಪೋರೇಟರ್‌ಗಳು ತಮ್ಮ ನಾಮಫಲಕ, ಲೆಟರ್‌ಹೆಡ್ ಗಳಲ್ಲಿ ತುಳು ಲಿಪಿಯನ್ನು ಬಳಕೆ ಮಾಡಿರುವುದು ಬಹಳ ಮೆಚ್ಚುಗೆಗೆ ಪಾತ್ರವಾಗಿದೆ.

ಯುವ ತುಳುನಾಡ್ (ರಿ) ಮತ್ತು ಜೈ ತುಳುನಾಡ್ ಸಂಘಟನೆಗಳ ನೇತೃತ್ವದಲ್ಲಿ ಈ ರೀತಿಯ ಬೃಹತ್ ಅಭಿಯಾನಗಳು ಮೂಡಿ ಬರುತ್ತಿವೆ.

ಇದನ್ನೂ ನೋಡಿ : ತುಳುವಲ್ಲೂ ಸಿಗಲಿ ಮಾತೃ ಭಾಷೆಯ ಶಿಕ್ಷಣ

ಮೂರು ದಿನಗಳ ಹಿಂದಷ್ಟೇ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಕಚೇರಿಯಲ್ಲಿ ತುಳು ಲಿಪಿಯಲ್ಲಿ ನಾಮ ಫಲಕವನ್ನು ಹಾಕಿದ್ದರು ಮತ್ತು ಅವರ ಈ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಯನ್ನು ಪಡೆದಿದ್ದರು.

Tulu Script Nameplate in my office at Mangaluru City Corporation.

#TuluScript #ReviveTulu #Tulunad #PromoteTulu

Posted by Vedavyas Kamath on Wednesday, 14 October 2020

ಅದೇ ರೀತಿ ಕಂಕನಾಡಿ-ವೇಲೆನ್ಸಿಯಾ ಕಾರ್ಪೋರೇಟರ್ ಸಂದೀಪ್ ಗರೋಡಿ ಕೂಡ ತಮ್ಮ ಹೆಸರನ್ನು ತುಳು ಲಿಪಿಯಲ್ಲಿ ತಮ್ಮ ಲೆಟರ್‌ಹೆಡ್‌ನಲ್ಲಿ ಇರಿಸಿದ್ದಾರೆ ಮತ್ತು ಗರೋಡಿಯ ಸ್ಥಳೀಯರು ಮಂಗಳೂರು ದಕ್ಷಿಣ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರಾದ ಪ್ರಕಾಶ್ ಗರೋಡಿಯನ್ನು ಅಭಿನಂದಿಸಿ ತುಳು ಲಿಪಿಯಲ್ಲಿ ಬ್ಯಾನರ್ ಅಳವಡಿಸಿದ್ದಾರೆ.

ಸ ಜೊತೆ ಮಾತನಾಡಿದ ಸಂದೀಪ್ ಗರೋಡಿ, “ಇಂದು ತುಳುನಾಡಿನಾದ್ಯಂತ, ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸುವ ಬಗ್ಗೆ ಮಾತನಾಡುತ್ತಾರೆ. ಅಷ್ಟರಲ್ಲಿ, ಇದನ್ನು ಮಾಡಲು ಎಲ್ಲರೂ ಮುಂದಾಗಬೇಕು. ನಾನು ತುಳು ಲಿಪಿಯಲ್ಲಿ ನನ್ನ ಹೆಸರನ್ನು ನನ್ನ ಲೆಟರ್‌ಹೆಡ್‌ನಲ್ಲಿ ಇರಿಸಿದ್ದೇನೆ. ಇದನ್ನು ಎಲ್ಲರೂ ಮಾಡಲು ಆಗುತ್ತದೆ ಎಂದು ನಾನು ಭಾವಿಸುತ್ತೇನೆ. ಆಗ ಜನರು ಅದನ್ನು ಗಮನಿಸಿ, ಮುಂದೆ ಅವರೂ ಸಹ ಲಿಪಿ ಕಲಿಯಲು ಉತ್ಸುಕರಾಗುತ್ತಾರೆ ಮತ್ತು ತುಳು ಲಿಪಿಯಲ್ಲಿ ಹೆಸರುಗಳನ್ನು ಬರೆಯುವ ಮೂಲಕ ಎಲ್ಲೆಡೆ ಬದಲಾವಣೆಗಳನ್ನು ತರುತ್ತಾರೆ” ಎಂದು ಸಂದೀಪ್ ಗರೋಡಿ ಹೇಳಿದರು.

ಅದೇ ರೀತಿ, ಮುಲ್ಕಿ ಮೂಡುಬಿದಿರೆ ಶಾಸಕರಾಗಿರುವ, ತುಳು ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿರುವ ಉಮಾನಾಥ್ ಕೋಟ್ಯಾನ್ ಸಹ ತುಳು ಲಿಪಿಯಲ್ಲಿ ತಮ್ಮ ನಾಮಫಲಕವನ್ನು ಅಳವಡಿಸಿದ್ದಾರೆ.

ಯುವ ತುಳುನಾಡ್ (ರಿ) ಕುಡ್ಲ ಮೊಕಲೆನ ತುಳು ಅಭಿಯಾನದ ವತಿಡ್ದ್ ತುಳು ಲಿಪಿತ ನಾಮ ಫಲಕನ್ ಕೊರ್ ನ ಕ್ಷಣ.

Posted by Umanatha Kotian on Friday, 16 October 2020

LEAVE A REPLY

Please enter your comment!
Please enter your name here