ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ (ರಿ ) ಇವರ ಸಹಯೋಗದೊಂದಿಗೆ ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು, ಹಳೆಯಂಗಡಿ ಮತ್ತು ಶ್ರೀ ಗಜಾನನ ಸ್ಪೋರ್ಟ್ಸ್ ಕ್ಲಬ್ ತೋಕೂರು, ಹಳೆಯಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಬಲೆ ತುಳು ಲಿಪಿ ಕಲ್ಪುಗ ವಿಶೇಷ ಕಾರ್ಯಾಗಾರಕ್ಕೆ, ಭಾನುವಾರ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ತುಳುನಾಡಿನಲ್ಲಿ ಎಲ್ಲ ಜಾತಿ, ಮತ, ಧರ್ಮದವರು ಇದ್ದರೂ ಸಹ ತುಳುನಾಡಿನ ತಾಯಿಯ ಮಮತೆಯಿಂದ ತುಳು ಭಾಷಾಭಿಮಾನ ಉಳಿಸಿಕೊಳ್ಳಲು ತುಳು ಸಾಹಿತ್ಯ ಅಕಾಡೆಮಿಯೊಂದಿಗೆ ಧ್ವನಿಯಾದಲ್ಲಿ ಅಧಿಕೃತವಾಗಿ ತುಳು ಭಾಷೆಗೆ ಪ್ರಾದೇಶಿಕ ಮಾನ್ಯತೆ ಸಿಗುತ್ತದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ದಯಾನಂದ. ಜಿ. ಕತ್ತಲಸಾರ್ ಹೇಳಿದರು.
ರೋಟರಿ ಕ್ಲಬ್ ಮುಲ್ಕಿ ಇದರ ಅಧ್ಯಕ್ಷರಾದ ರೋ| ಅಶೋಕ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಜೈ ತುಳುನಾಡ್ (ರಿ ) ಇದರ ಅಧ್ಯಕ್ಷರಾದ ಶ್ರೀ ಸುದರ್ಶನ್ ಸುರತ್ಕಲ್, ಸದಸ್ಯ ಶ್ರೀ ಕಿರಣ್ ತುಳುವ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀ ನರೇಂದ್ರ ಕೆರೆಕಾಡು, ಶ್ರೀ ನಾಗೇಶ್ ಕುಲಾಲ್ ತುಳು ಲಿಪಿ ಬರೆಯುವ ಮೂಲಕ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ದಯಾನಂದ ಜಿ. ಕತ್ತಲಸಾರ್, ಸದಸ್ಯರಾದ ಶ್ರೀ ನಾಗೇಶ್ ಕುಲಾಲ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯತ್ ಪಡುಪಣಂಬೂರು ಇದರ ಮಾಜಿ ಅಧ್ಯಕ್ಷರಾದ ಮೋಹನ್ ದಾಸ್, ಮಾಜಿ ಪಂಚಾಯತ್ ಸದಸ್ಯರು ಶ್ರೀ ನಾರಾಯಣ ಸುವರ್ಣ, ಶ್ರೀ ಸಂತೋಷ್ ಕುಮಾರ್, ರೋಟರಿ ಕ್ಲಬ್ ಬೈಕಂಪಾಡಿ ಇದರ ಮಾಜಿ ಅಧ್ಯಕ್ಷರು ಶ್ರೀ ಶ್ರೀಕಾಂತ್ ಶೆಟ್ಟಿ ಬಾಳ, ಶ್ರೀ ಗಜಾನನ ಸ್ಪೋರ್ಟ್ಸ್ ಕ್ಲಬ್ (ರಿ )ತೋಕೂರು, ಇದರ ಅಧ್ಯಕ್ಷರು ಶ್ರೀ ನವೀನ್ ಶೆಟ್ಟಿಗಾರ್, ಡೈಜಿ ವರ್ಲ್ಡ್ ನ್ಯೂಸ್ ಚಾನೆಲ್ ಇದರ ಅಹಮದ್ ಬಾವ, ಸ್ಟೀವನ್ ಉಪಸ್ಥಿತರಿದ್ದರು.
ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ತೋಕೂರು ಹಾಗೂ ಗಜಾನನ ಸ್ಪೋರ್ಟ್ಸ್ ಕ್ಲಬ್ ಇದರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು, ಇದರ ಅಧ್ಯಕ್ಷರು ಶ್ರೀ ಸಂತೋಷ್ ದೇವಾಡಿಗ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಸಂಸ್ಥೆಯ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಪ್ರಶಾಂತ್ ಕುಮಾರ್ ಬೇಕಲ್ ವಂದಿಸಿದರು, ಕಾರ್ಯಾಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.