ತುಳುವರಿಗೆ ತುಳುವಿನಲ್ಲೇ ಶಿಕ್ಷಣ – ಸಚಿವರನ್ನು ಒತ್ತಾಯಿಸಿದ ಶಾಸಕ ವೇದವ್ಯಾಸ್ ಕಾಮತ್

0
173
Tap to know MORE!

ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕು ಎಂದಿದೆ. ಅದರನ್ವಯ, ರಾಜ್ಯದ ಕರಾವಳಿ ಭಾಗದ ಸಾಂವಿಧಾನಿಕವಾಗಿ ಮಾನ್ಯತೆ ಸಿಗದಿದ್ದರೂ, ಲಕ್ಷಾಂತರ ಭಾಷಿಕರು ಇರುವ ತುಳು ಭಾಷೆಯಲ್ಲೂ ಶಿಕ್ಷಣ ನೀಡುವಂತೆ ತುಳುನಾಡಿನಲ್ಲಿ ಕೂಗು ಎದ್ದಿದೆ.

ಇದಕ್ಕೆ ಪುಷ್ಟಿ ಎಂಬಂತೆ ಇಂದು ಶಾಸಕ ವೇದವ್ಯಾಸ್ ಕಾಮತ್ ರವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸಚಿವ ಸುರೇಶ್ ಕುಮಾರ್ ರವರನ್ನು ಭೇಟಿ ಮಾಡಿ ತುಳುವರಿಗೆ ಪ್ರಾಥಮಿಕ ವಿದ್ಯಾಭ್ಯಾಸವನ್ನು ತುಳು ಭಾಷೆಯಲ್ಲಿಯೇ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಮುಂದೆ ಎಲ್ಲರೂ ತುಳುವಿನಲ್ಲಿ ಓದು ಬರಹ ಮಾಡಬೇಕು ಎಂಬ ನಮ್ಮೆಲ್ಲರ ಕನಸು ನನಸಾಗುವ ದಿನ ಬಂದಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಪೊಸ ಶಿಕ್ಷಣ ನೀತಿದ ಪ್ರಕಾರ ಒಂಜಿನೇ ಕ್ಲಾಸ್ ರ್ದ್ ಐನೇ ಕ್ಲಾಸ್ ಮುಟ ಜೋಕುಲು ಅಪ್ಪೆ ಭಾಸೆಡೇ ಬರವು ಪಡೆಪಿನ ಅವಕಾಶ ಉಂಡು….

Posted by Vedavyas Kamath on Friday, 28 August 2020

ದೇಶದಲ್ಲಿ 34 ವರ್ಷಗಳ ಬಳಿಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ಇದಕ್ಕೆ ಈಗಾಗಲೇ, ಕೇಂದ್ರ ಸರ್ಕಾರ ಇತ್ತೀಚೆಗೆ ಒಪ್ಪಿಗೆ ನೀಡಿದೆ. ಅದರಲ್ಲಿ ಒಂದು, 5ನೇ ತರಗತಿವರೆಗಿನ ಮಕ್ಕಳಿಗೆ ಶಿಕ್ಷಣವನ್ನು ಮಾತೃಭಾಷೆಯಲ್ಲೇ ನೀಡುವುದು.

ಇದನ್ನೂ ನೋಡಿ : ತುಳುವಲ್ಲೂ ಸಿಗಲಿ ಮಾತೃಭಾಷಾ ಶಿಕ್ಷಣ – ವಿಶೇಷ ಲೇಖನ

ಇದರಿಂದಾಗಿ, ಕೆಲವು ರಾಜ್ಯಗಳಲ್ಲಿ ಸಾಂವಿಧಾನಿಕವಾಗಿ ಅಧಿಕೃತವೆಂದು ಘೋಷಿಸಲ್ಪಡದೆ, ನಿತ್ಯ ಬಳಕೆಯಲ್ಲಿರುವ ಭಾಷೆಗಳ ಜನರು ತಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎನ್ನುವ ವಾದಕ್ಕೆ ಪುಷ್ಟಿ ಸಿಕ್ಕಂತಾಗಿದೆ. ಇದಕ್ಕೆ ಮುಖ್ಯ ಉದಾಹರಣೆ ನಮ್ಮದೇ ರಾಜ್ಯದ ಕರಾವಳಿ ಭಾಗದಲ್ಲಿ ಬಹು ಬಳಕೆಯಲ್ಲಿರುವ ತುಳು ಭಾಷೆ.

ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ ಬಗ್ಗೆ ಎಲ್ಲೆಡೆ ಚರ್ಚೆ ಆರಂಭವಾಗುತ್ತಿರುವ ಹೊತ್ತಿನಲ್ಲೇ ತುಳುವರಿಗೆ ತುಳು ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡಬೇಕೆನ್ನುವ ಕೂಗು ಎದ್ದಿದೆ. ಇದೀಗ ಈ ವಾದಕ್ಕೆ ತುಳುನಾಡಿನ ರಾಜಕಾರಣಿಗಳ ಬೆಂಬಲವೂ ಸಿಕ್ಕಿದೆ.

LEAVE A REPLY

Please enter your comment!
Please enter your name here