ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು 23 ಹೊಸ ಪದಾಧಿಕಾರಿಗಳ ಹೆಸರನ್ನು ಶನಿವಾರ ಘೋಷಿಸಿದರು. ಇದರಲ್ಲಿ ತೇಜಸ್ವಿ ಸೂರ್ಯ ಸೇರಿದಂತೆ ರಾಜ್ಯದ ಮೂವರಿಗೆ ಸ್ಥಾನ ದೊರಕಿದೆ.
ಸಂಸದ ತೇಜಸ್ವಿ ಸೂರ್ಯ ಅವರನ್ನು ಬಿಜೆಪಿ ಯುವ ಮೋರ್ಚಾದ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಹಾಗೆಯೇ, ಸಚಿವ ಸಿ.ಟಿ.ರವಿ ಅವರನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯಾದರ್ಶಿಯಾಗಿ ಮತ್ತು ಸಂಸದ ರಾಜೀವ್ ಚಂದ್ರಶೇಖರ್ಗೆ ಬಿಜೆಪಿ ವಕ್ತಾರರಾಗಿ ನೇಮಕ ಮಾಡಲಾಗಿದೆ.
भाजपा राष्ट्रीय अध्यक्ष श्री @JPNadda ने भाजपा केंद्रीय पदाधिकारियों के नामों की घोषणा की। pic.twitter.com/oLGRoSmbPa
— BJP (@BJP4India) September 26, 2020
ಎಲ್. ಸಂತೋಷ್, ಬಿಜೆಪಿ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ಕಾರ್ಯ ಮುಂದುವರಿಸಲಿದ್ದಾರೆ.