ತೇಜೋವಧೆ

0
199
Tap to know MORE!

ನಾವೆಲ್ಲರೂ ಸಮಾಜ ಜೀವಿಗಳು. ಇಲ್ಲಿ ಒಳ್ಳೆಯವರು ಕೆಟ್ಟವರು ಇರುವುದು ಸರ್ವೇ ಸಾಮಾನ್ಯ. ಈ ಸಮಾಜದಲ್ಲಿ ಕೆಲವೊಂದು ವಿಘ್ನ ಸಂತೋಷಿಗಳು ಒಳ್ಳೆಯವರನ್ನೂ ತಪ್ಪಾಗಿ ಬಿಂಬಿಸಿ ಕಪೋಲ ಕಲ್ಪಿತ ಕತೆಗಳನ್ನು ಕಟ್ಟಿ ಗಾಳಿ ಸುದ್ದಿ ಹಬ್ಬಿಸುವುದರಲ್ಲಿ ನಿಸ್ಸೀಮತೆಯನ್ನು ತೋರುತ್ತಾರೆ. ಇದರಿಂದ ತಾನು ಮಾಡದ ತಪ್ಪಿಗೆ ಯಾರದೋ ಷಡ್ಯಂತ್ರಕ್ಕೆ ಬಲಿ ಬಿದ್ದು ತಾನು ಮಾನಸಿಕವಾಗಿ ಕುಗ್ಗಿದಾಗ ತನ್ನ ಆಪ್ತ ಸ್ನೇಹಿತನ ಸಲಹೆ ಧೈರ್ಯ ತುಂಬುವ ಪರಿ, ಇದು ನಿಜವಾದ ಸ್ನೇಹಿತನ ಧರ್ಮ ಎಂಬುದನ್ನು ಈ ಕಥೆಯು ಸಾದರಪಡಿಸುತ್ತದೆ.

ಅಂದು ಚಿತ್ತ ತನ್ನ ಆಫೀಸು ಕೆಲಸದಲ್ಲಿ ಮುಳುಗಿದ್ದ, ಆಗ ದೂರವಾಣಿ ಕರೆಯೊಂದನ್ನು ಕೈಗೆತ್ತಿಕೊಂಡಾಗ, ತನ್ನ ಗೆಳೆಯ ಪಚ್ಚು ಕರೆ ಮಾಡಿರುವುದು ತಿಳಿದು ಬಂದಿತು. ಏನಿರಬಹುದು ? ಯಾಕಿರಬಹುದು? ಎಂಬ ಆಲೋಚನೆಗಳಿಂದ ಕರೆಯನ್ನು ಸ್ವೀಕರಿಸಿದಾಗ ವಿಷಯವೊಂದು ತಿಳಿದು ಒಂದು ಬಾರಿ ಗರ ಬಡಿದವನಂತೆ ದುಃಖ ಭರಿತನಾದರು. ದೈರ್ಯಗುಂದದೆ ಹೌದಾ ? ಎಂಬ ಉತ್ತರವನ್ನಿತ್ತನು. ತನ್ನ ಪ್ರಾಣ ಸ್ನೇಹಿತನಾದ ಚಿತ್ತನನ್ನು ಅನ್ಯಾಯವಾಗಿ ಆರೋಪದ ಕೂಪದಲ್ಲಿ ಸಿಲುಕಿಸಲು ಪಚ್ಚು ತಯಾರಿರಲಿಲ್ಲ. ಪಚ್ಚುವಿಗೆ ತಿಳಿದಿತ್ತು ಸತ್ಯಾಂಶ.

ಲೇಖಕರ ಇನ್ನೊಂದು ಬರಹ : ನಾನು ಭಾರತದ ಪ್ರಧಾನಮಂತ್ರಿಯಾದರೆ?

ಇಲ್ಲಿ ಯಾರೋ ತಪ್ಪೆಸಗಿ ಯಾರಿಗೋ ಅಪರಾಧಿ ಎಂಬ ಕೆಟ್ಟ ಪಟ್ಟ ಕೊಟ್ಟು, ಸಮಾಜದಲ್ಲಿ ಕೆಟ್ಟ ಹೆಸರು ತರಬೇಕೆಂಬ ನಿಗೂಢ ಸಂಚೊಂದು ನಡಿತಿದೆ ಎಂದು ತಿಳಿದ ಕಾರಣ ಪಚ್ಚು ತನ್ನ ಗೆಳೆಯನಿಗೆ ನೀನು ಆದಷ್ಟು ಜಾಗರೂಕತೆ ವಹಿಸಿದರೆ ಉತ್ತಮ, ಯಾಕೆಂದರೆ ಈಗ ನಿನ್ನ ಬಗ್ಗೆನೇ ಚರ್ಚೆ, ಮಾತುಕತೆ ನಡೆಯುತ್ತದೆ, ನಿನಗೊಂದು ಕಪ್ಪು ಚುಕ್ಕೆ ಬಂದಿದೆ. ನಿನ್ನ ಉತ್ತಮ ಹೆಸರಿಗೆ ಕಳಂಕ ಬಂದಿದೆ, ಕಪ್ಪು ಚುಕ್ಕೆ ಹೇಗೆ ? ಎಲ್ಲಿಂದ ಬಂತು ? ಎಂಬುದು ನಿನಗೂ ನನಗೂ ತಿಳಿದ ವಿಷಯ. ನೀನು ಆದಷ್ಟು ಆ ವ್ಯಕ್ತಿಯಿಂದ ದೂರ ಇರುವುದು ಒಳಿತು ಎಂದಾಗ ಕಣ್ಣಾಲಿಗಳು ತುಂಬಿ ಹೋದವು.

ಪಚ್ಚು ತನ್ನ ಮಾತನ್ನು ಮುಂದುರೆಸುತ್ತಲೇ ಇದ್ದ, ಇತ್ತ ಚಿತ್ತನ ಗಂಟಲು ಒಣಗಿತು, ಮಾತೇ ಬಾರದಾದವು, ಅಲ್ಲೇ ಮೇಜಿನ ಮೇಲೆ ಇದ್ದ ನೀರನ್ನು ಕುಡಿಯಲಾರಂಬಿಸಿದ, ಬಳಿಕ ಪಚ್ಚು ಹೇಳುವುದನ್ನು ಆಲಿಸತೊಡಗಿದ, ” ನಿನ್ನ ಬಗ್ಗೆ ಸಮಾಜ ತುಂಬಾ ಒಳ್ಳೆಯ ಅಭಿಪ್ರಾಯ ಹೊಂದಿದೆ, ಎಲ್ಲರ ಮನದಲ್ಲೂ ಉತ್ತಮ ಭಾವನೆ ಇದೆ, ನೀನು ಸಮಾಜದಲ್ಲಿ ಒಬ್ಬ ಗಣ್ಯ ವ್ಯಕ್ತಿ ಎಂಬುದಕ್ಕೆ ಸಂಶಯವೇ ಇಲ್ಲ ಎಂದು ನನ್ನ ಅಭಿಮಾನಿಯೊಬ್ಬರು ನಿನ್ನ ಕುರಿತು ಹೇಳಿರುವರು. ಆದರೆ ನೀನು, ನಿನಗೆ ಕಪ್ಪು ಚುಕ್ಕೆ ತಂದಿಟ್ಟ ಆ ವ್ಯಕ್ತಿಯಿಂದ ದೂರ ಸರಿಯಯಲೇ ಬೇಕು ಎಂಬ ಮಾತು ಕೇಳಿಸಿಕೊಂಡಾಗ ಒಂದು ಬಾರಿ ಏನೂ ತೋಚದೇ, ಚಿತ್ತ ಮನಸ್ಸಿನಲ್ಲೇ *”ಹೌದು, ಪರಿವರ್ತನೆ ಜಗದ ನಿಯಮ”* ಇಂದಿನಿಂದ ನಾನು ಪಚ್ಚು ಹೇಳಿದ ಮಾತು ಕೇಳಬೇಕು, ತನ್ನ ಹೆಸರಿಗೆ ಬಂದ ಕಪ್ಪು ಚುಕ್ಕೆಯನ್ನ ಅಳಿಸಿ ಹಾಕಬೇಕು ಎಂದು ಚಿತ್ತ ಮನಸಲ್ಲೇ ನಿರ್ಧರಿಸಿದ.

ಹೀಗೆ ಓರ್ವನ ಮೇಲೆ ತೇಜೋವಧೆಗೈದು ಅದರ ಆನಂದ ನೋಡುವ ಜನರಿಗಿಂತ ಅದನ್ನು ನಿವಾರಿಸುವ, ನೋವುರಹಿತವಾಗಿ ನಿಭಾಯಿಸುವ ಚಾತುರ್ಯ, ಗಾಯದ ಮೇಲೆ ಬರೆ ಎಳೆಯುವುದರ ಬದಲು ಬಂದಿರುವ ಅಪವಾದವನ್ನು ನಿವಾರಿಸಿ ಗಾಯವನ್ನು ಮಾಯ ಮಾಡುವಲ್ಲಿ ಸಫಲತೆಯ ಗುಣ ಕೇವಲ ಆಪ್ತಮಿತ್ರನಿಂದಷ್ಟೇ ಮಾಡಲು ಸಾಧ್ಯ ಎಂಬುದನ್ನು ನಿರೂಪಿಸುವುದೇ ಈ ಕಥೆಯ ಮೂಲ ಉದ್ದೇಶ.

ಕಥೆ ರಚನೆ : ಶ್ರೀಮತಿ ರೇಖಾ ಸುದೇಶ್ ರಾವ್, ಮುಲ್ಕಿ-ಸುರತ್ಕಲ್

LEAVE A REPLY

Please enter your comment!
Please enter your name here