ತುಳು ಸಂಸ್ಕೃತಿ ಮತ್ತು ಸಂಸ್ಕಾರವು ವಿಶ್ವಾದ್ಯಂತ ಪಸರಿಸಿದೆ ಎಂದು ನಾಟಕಕಾರ ಹಾಗೂ ನಿವೃತ್ತ ರಾಜ್ಯ ಲೆಕ್ಕಪತ್ರ ವಿಭಾಗದ ಉಪನಿರ್ದೇಶಕ ಜನಾರ್ದನ ಪಡುಪಣಂಬೂರು ಹೇಳಿದರು. ಅವರು ತೋಕೂರಿನಲ್ಲಿ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ “ಆಟಿದ ನೆಂಪು” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ರಾಜ್ಯ ವಿವೇಕಾನಂದ ಯುವ ಪ್ರಶಸ್ತಿ ಪಡೆದಿರುವ ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಅಧ್ಯಕ್ಷ ಸುಧಾಕರ್ ಆರ್.ಅಮೀನ್ ಹಾಗೂ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸದಸ್ಯ ನರೇಂದ್ರ ಕೆರೆಕಾಡು ಅವರನ್ನು ಸನ್ಮಾನಿಸಲಾಯಿತು.
ಕ್ಲಬ್ನ ಅಧ್ಯಕ್ಷ ಸಂತೋಷ್ ದೇವಾಡಿಗ ಸ್ವಾಗತಿಸಿದರು, ಕೋಶಾಧಿಕಾರಿ ಸಂಪತ್ ದೇವಾಡಿಗ ಹಾಗೂ ನೀಮಾ ಹಳೆಯಂಗಡಿ ಅತಿಥಿ ಅಭ್ಯಾಗತರನ್ನು ಪರಿಚಯಿಸಿದರು. ಜ್ಯೋತಿ ಭಾಸ್ಕರ್ ಆಟಿದ ತಿನಸುಗಳ ಮಾಹಿತಿ ನೀಡಿದರು. ಮಹಿಳಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷೆ ವಾಣಿ ಮಹೇಶ್ ವಂದಿಸಿದರು. ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸುರೇಶ್ ಶೆಟ್ಟಿ ನಿರೂಪಿಸಿದರು.
ಈ ಸಂದರ್ಭ, ಪಡುಪಣಂಬೂರು ಗ್ರಾ.ಪಂ.ನ ಮಾಜಿ ಅಧ್ಯಕ್ಷ ಮೋಹನ್ದಾಸ್, ಸದಸ್ಯ ಸಂತೋಷ್ ಕುಮಾರ್, ಸ್ಪೋರ್ಟ್ಸ್ ಕ್ಲಬ್ನ ಗೌರವಾಧ್ಯಕ್ಷ ನಾರಾಯಣ ಜಿ.ಕೆ. ಕಾರ್ಯದರ್ಶಿ ಜಗದೀಶ್ ಕುಲಾಲ್, ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.