ತೋಕೂರಿನಲ್ಲಿ ಗೋಡೆಬರಹದ ಮೂಲಕ ಪರಿಸರ ಜಾಗೃತಿ

0
260
Tap to know MORE!

ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ  ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ ಕುಟ್ಹಿನ್ನೊ “ಮಲ್ಲಿಗೆ ಮನೆ”ಯ ಮುಂಭಾಗದ ತೋಕೂರು-ಲೈಟ್ ಹೌಸ್ ರಸ್ತೆಯ ತಿರುವಿನಲ್ಲಿ ರವಿವಾರ, ಬೆಳಿಗ್ಗೆ 9:30 ಕ್ಕೆ ಸ್ವಚ್ಛತೆಯ ಕಡೆಗೆ ಒಂದು ಹೆಜ್ಜೆ ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ, ಪ್ಲಾಸ್ಟಿಕ್ ಮುಕ್ತ ತೋಕೂರು ಗ್ರಾಮಕ್ಕೆ ಸಹಕರಿಸಿ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಗೋಡೆ ಬರಹದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು

ಕಲಾಕಾರ ಶ್ರೀ ಉದಯ ಕುಮಾರ್ ಲೈಟ್ ಹೌಸ್ ಇವರೊಂದಿಗೆ ಸಂಸ್ಥೆಯ ಸದಸ್ಯರು ಗೋಡೆ ಬರಹ ಬರೆಯಲು ಕೈ ಜೋಡಿಸಿದರು. ಗೋಡೆ ಬರಹಕ್ಕೆ ಸ್ಥಳ ದಾನವನ್ನು ನೀಡಿದ ಗ್ರಾಮ ಪಂಚಾಯತ್ಪ ಡುಪಣಂಬೂರು ವ್ಯಾಪ್ತಿಯ 10ನೇ ತೋಕೂರಿನ 2 ನೇ ವಾರ್ಡ್ ನ ನಿವಾಸಿ ಮಲ್ಲಿಕಾ ಸದಾಶಿವ ದೇವಾಡಿಗ ದಂಪತಿಗಳು ಗೋಡೆ ಬರಹವನ್ನು ಅನಾವರಣ ಗೊಳಿಸಿದರು.

ತೋಕೂರು : ಸ್ಪೋರ್ಟ್ಸ್ ಕ್ಲಬ್‌ನ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಇವರು ”ಪ್ಲಾಸ್ಟಿಕ್ ಆರೋಗ್ಯಕ್ಕೆ ಹಾನಿಕಾರಕ ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಪರಿಸರ ನಾಶವಾಗುತ್ತದೆ. ಪ್ಲಾಸ್ಟಿಕ್ ಪ್ರಾಣಿ ಸಂಕುಲದ ಮೇಲೂ ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಿರುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದರೂ,ಅದರ ಪ್ರಮಾಣ ಕಡಿಮೆಯಾಗಿಲ್ಲ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲಾದರೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಿರುವಂತೆ ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಿಸಲು ಇಂತಹ ಸಂಘ ಸಂಸ್ಥೆಗಳಿಂದ ಸಾಧ್ಯ” ಎಂದರು

ಪಡುಪಣಂಬೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಮೋಹನದಾಸ್ ನಮ್ಮ ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಸಾಕಷ್ಟು ತೊಂದರೆ ಕಂಡು ಬರುತ್ತಿದೆ.ಜೊತೆಗೆ ಆರೋಗ್ಯವೆ ಭಾಗ್ಯ ಎಂಬಂತೆ ನಮ್ಮ ಆರೋಗ್ಯ, ಸುತ್ತಲಿನ ಸ್ವಚ್ಛ ಪರಿಸರ ಅವಲಂಬಿಸಿದೆ. ಆದುದರಿಂದ ನಮ್ಮ ಪರಿಸರದ ಬಗ್ಗೆ ನಾವು ತುಂಬಾ ಕಾಳಜಿ ವಹಿಸುವುದು ಮುಖ್ಯ.ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತೆ ನಮಗೆ ಅವಶ್ಯವಾಗಿದೆ ಎಂದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರು
ದಿನೇಶ್ ಕುಲಾಲ್, ಸಂತೋಷ್ ಕುಮಾರ್, ಸಂಸ್ಥೆಯ ಉಪಾಧ್ಯಕ್ಷರು ದೀಪಕ್ ಸುವರ್ಣ,ಜೊತೆ ಕಾರ್ಯದರ್ಶಿ ಗಣೇಶ್ ದೇವಾಡಿಗ, ಕೋಶಾಧಿಕಾರಿ ಸಂಪತ್ ದೇವಾಡಿಗ, ಪರಿಸರ ಮತ್ತು ಸಂರಕ್ಷಣಾ ಕಾರ್ಯದರ್ಶಿ ಸುನಿಲ್ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಬೇಕಲ್ ತಂಡದ ನಾಯಕ ಗೌತಮ್ ಬೆಲ್ಚಡ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷರು ಸಂತೋಷ್ ದೇವಾಡಿಗ ಸ್ವಾಗತಿಸಿದರು, ಗೌರವ ಪ್ರಧಾನ ಕಾರ್ಯದರ್ಶಿ ಜಗದೀಶ್ ಕುಲಾಲ್ ವಂದಿಸಿದರು ಹಾಗೂ ಕಾರ್ಯಕಾರಿ ಸಮಿತಿಯ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here