ತೋಕೂರಿನಲ್ಲಿ ಮಾನಸಿಕ ಆರೋಗ್ಯ ಮಾಹಿತಿ ಕಾರ್ಯಾಗಾರ

0
154
Tap to know MORE!

ತೋಕೂರು: ಪ್ರಜ್ಞಾ ಸಲಹಾ ಕೇಂದ್ರ, ಕಂಕನಾಡಿ,ಮಂಗಳೂರು, ಹೆಣ್ಣು ಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನ ಯೋಜನೆ, ಇದರ ಆಶ್ರಯದಲ್ಲಿ ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ), ತೋಕೂರು, ಹಳೆಯಂಗಡಿ, ಇದರ ಸಹಯೋಗದೊಂದಿಗೆ “ಮಾನಸಿಕ ಆರೋಗ್ಯ ಮಾಹಿತಿ ಕಾರ್ಯಗಾರದ ಉಧ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ಜರಗಿತು.

ಈ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ವಿದ್ಯಾ ಎನ್. ಸಂಯೋಜಕರು ಕೋಮಲ್ ಸ್ಪರ್ಶ್ ಕೌನ್ಸಿಲಿಂಗ್ ಸೆಂಟರ್, ಮಂಗಳೂರು ಹಾಗೂ ಸಹಾಯಕ ಪ್ರಾಧ್ಯಾಪಕರು, ಮಾನವಿಕ ಹಾಗೂ ಸಮಾಜ ವಿಜ್ಞಾನ ವಿಭಾಗ, ಶ್ರೀನಿವಾಸ್ ವಿಶ್ವವಿದ್ಯಾನಿಲಯ, ಪಾಂಡೇಶ್ವರ ಇವರು ಆಗಮಿಸಿದ್ದರು.

ಮುಖ್ಯ ಅತಿಥಿಗಳಾಗಿ, ಶ್ರೀಮತಿ ಸುನೀತಾ ನಾಯ್ಕ್, ಆಪ್ತ ಸಮಾಲೋಚಕಿ ಹಾಗೂ ತರಬೇತುದಾರರು, ಕೋಮಲ್ ಸ್ಪರ್ಶ್ ಕೌನ್ಸಿಲಿಂಗ್ ಸೆಂಟರ್, ಮಂಗಳೂರು, ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮೋಹನ್ ದಾಸ್, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ), ತೋಕೂರು, ಹಳೆಯಂಗಡಿ ಇದರ ಗೌರವ ಅಧ್ಯಕ್ಷರಾದ ಶ್ರೀ ನಾರಾಯಣ ಜಿ. ಕೆ. ಮಹಿಳಾ ಕಾರ್ಯಕಾರಿ ಸಮಿತಿ ಕಾರ್ಯಾಧ್ಯಕ್ಷೆ, ಶ್ರೀಮತಿ ವಾಣಿ ಮಹೇಶ್ ಉಪಸ್ಥಿತರಿದ್ದರು.

ಶ್ರೀ ವಿಲಿಯಂ ಸ್ಯಾಮ್ಯುವೆಲ್, ಯೋಜನಾ ಸಂಯೋಜಕರು, ಪ್ರಜ್ಞಾ ಸಲಹಾ ಕೇಂದ್ರ, ಕಂಕನಾಡಿ, ಮಂಗಳೂರು ಇವರು ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯಾಗಾರದಲ್ಲಿ, ಕುಮಾರಿ ನಂದಾ ಪಾಯ್ಸ್ ಸಾಮಾಜಿಕ ಕಾರ್ಯಕರ್ತೆ, ಸರಕಾರಿ ಹಿರಿಯ ಪ್ರಾಥಮಿಕ ಹಿಂದುಸ್ಥಾನಿ ಶಾಲೆ ತೋಕೂರು ಇದರ ಮುಖ್ಯ ಶಿಕ್ಷಕಿ ಗುಲ್ಶಾನ್ ಬಾನು, ಸಹ ಶಿಕ್ಷಕಿ ಶ್ರೀಮತಿ ವನಿತಾ, ಸಂಸ್ಥೆಯ ಗೌರವ ಮಾರ್ಗದರ್ಶಕರು *ಶ್ರೀ ರಮೇಶ್ ಅಮೀನ್ ಮುಂಬೈ, ಕ್ಲಬ್ ನ ಪ್ರಧಾನ ಕಾರ್ಯದರ್ಶಿ *ಶ್ರೀ ಜಗಧೀಶ್ ಕುಲಾಲ್, ನವೀನ್ ಶೆಟ್ಟಿಗಾರ್, ಅಧ್ಯಕ್ಷರು, ಶ್ರೀ ಗಜಾನನ ಸ್ಪೋರ್ಟ್ಸ್ ಕ್ಲಬ್, ತೋಕೂರು, ಪ್ರಜ್ಞಾ ಸಲಹಾ ಕೇಂದ್ರ, ಕಂಕನಾಡಿ, ಮಂಗಳೂರು ಇದರ ಸಿಬ್ಬಂದಿ ವರ್ಗದವರು, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ), ತೋಕೂರು, ಹಳೆಯಂಗಡಿ ಇದರ ಪದಾಧಿಕಾರಿಗಳು ಸದಸ್ಯರು/ಸದಸ್ಯೆಯರು, ಗ್ರಾಮಸ್ಥರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯೆಯರಾದ, ಶ್ರೀಮತಿ ಪ್ರಮೀಳಾ ಕೇಶವ, ಶ್ರೀಮತಿ ಶೈಲಾ ನವೀನ್ ಶೆಟ್ಟಿಗಾರ್ ಮತ್ತು ಶ್ರೀಮತಿ ಸುಜಾತ ಜಿ. ಕೆ. ಪ್ರಾರ್ಥಿಸಿದರು, ಶ್ರೀಮತಿ ವಾಣಿ ಮಹೇಶ್ ಸ್ವಾಗತಿಸಿದರು, ಶ್ರೀಮತಿ ಸುಜಾತ ಜಿ.ಕೆ. ವಂದಿಸಿದರು ಹಾಗೂ ಶ್ರೀ ಪ್ರದೀಪ್ ಕಾಮತ್, ವಲಯ ಸಂಯೋಜಕರು, ಪ್ರಜ್ಞಾ ಸಲಹಾ ಕೇಂದ್ರ, ಕಂಕನಾಡಿ, ಮಂಗಳೂರು, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here