ತೋಕೂರು: 4ನೇ ವರ್ಷದ ಆಟಿದ ನೆಂಪು ಕಾರ್ಯಕ್ರಮ

0
310
Tap to know MORE!

ತೋಕೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ,ಮಂಗಳೂರು ಹಾಗೂ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ತೋಕೂರು,ಹಳೆಯಂಗಡಿ ಇದರ ಆಶ್ರಯದಲ್ಲಿ 4 ನೇ ವರ್ಷದ “ಆಟಿದ ನೆಂಪು” ಕಾರ್ಯಕ್ರಮವು ಸರಳವಾಗಿ ಹಾಗೂ ಸಾಂಕೇತಿಕವಾಗಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಗೋವಿಂದದಾಸ ಕಾಲೇಜಿನ ಉಪನ್ಯಾಸಕಿ ಅಕ್ಷತಾ ನವೀನ್ ಶೆಟ್ಟಿ ಎಡ್ಮೆಮಾರ್ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಅವರು ತುಳುನಾಡಿನ ಪರಂಪರೆಯ ಪ್ರಕಾರ ಶುಭ ಕಾರ್ಯಗಳಿಗೆ ವಿರಾಮ ಇರುವ ಆಟಿ ತಿಂಗಳಲ್ಲಿನ ವಿಶೇಷ ಆಹಾರ ಪದ್ಧತಿ, ಆಟಿ ಕಳೆಂಜ, ಆಟಿ ಅಮಾವಾಸ್ಯೆ ಇವೆಲ್ಲದರ ವಿಶೇಷತೆಯ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಸದಸ್ಯರಾದ ನಾಗೇಶ್ ಕುಲಾಲ್, ಇವರು ನಮ್ಮ ಪೂರ್ವಿಕರು ಪಾಲಿಸಿಕೊಂಡು ಬಂದಂತಹ ಆಟಿ ತಿಂಗಳ ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗಬೇಕಾದಂತಹ ಅಗತ್ಯತೆಯನ್ನು, ಮಹತ್ವವನ್ನು ನೆರೆದಿದ್ದವರಿಗೆ ಮನಗಾಣಿಸಿಕೊಟ್ಟರು.

ವೇದಿಕೆಯಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷರು ನಾರಾಯಣ ಜಿ ಕೆ, ಅಧ್ಯಕ್ಷರು ಸಂತೋಷ್ ದೇವಾಡಿಗ, ಹಾಗೂ ಮಹಿಳಾ ಕಾರ್ಯಧ್ಯಕ್ಷೆ ವಾಣಿ ಮಹೇಶ್ ಉಪಸ್ಥಿತರಿದ್ದರು.

ತುಳುನಾಡ ಗ್ರಾಮೀಣ ಸೊಗಡಿನ ಸುಮಾರು 34 ಬಗೆಯ ವಿಶಿಷ್ಟ ಖಾದ್ಯಗಳನ್ನು ಸಂಸ್ಥೆಯ ಸದಸ್ಯರು ಹಾಗೂ ಸದಸ್ಯೆಯರು ತಯಾರಿಸಿ ತಂದು ಗ್ರಾಮದ ಜನರಿಗೆ ಪ್ರೀತಿ ಪೂರ್ವಕವಾಗಿ ಉಣಬಡಿಸಿದರು.

ಆಟಿ ಅಮಾವಾಸ್ಯೆಯಲ್ಲೊಂದು ಕಷಾಯ

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದರ ಅಧಿಕಾರಿ ಪ್ರದೀಪ್ ಡಿಸೋಜ, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಕುಸಮ ಚಂದ್ರಶೇಖರ್, ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಪಡೆಯಲು “ಸುದ್ದಿವಾಣಿ” ವಾಟ್ಸಾಪ್ ಗುಂಪಿಗೆ ಸೇರಿ – ಸುದ್ದಿವಾಣಿ ಓದುಗರ ಬಳಗ

ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನ ತೋಕೂರು ಇದರ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾದ ಹರಿದಾಸ್ ಭಟ್, ಸದಸ್ಯರು ಯೋಗೀಶ್ ಕೋಟ್ಯಾನ್,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಸದಸ್ಯರಾದ ಶ್ರೀ ನರೇಂದ್ರ ಕೆರೆಕಾಡು, ವಿಶ್ವ ಬ್ಯಾಂಕ್ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಸಮಿತಿ ಕ್ಲಸ್ಟರ್-1ತೋಕೂರು, ಇದರ ಕೋಶಾಧಿಕಾರಿ ಪಿ. ಸಿ. ಕೋಟ್ಯಾನ್,ಮುಂಬೈ ಉದಯವಾಣಿ ಪತ್ರಕರ್ತರಾದ ರಮೇಶ್ ಅಮೀನ್,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸ್ಪೋರ್ಟ್ಸ್ ಕ್ಲಬ್ ನ ನಿಯೋಜಿತ ಗೌರವ ಅಧ್ಯಕ್ಷರು ಮೋಹನ್ ದಾಸ್, ನಿಯೋಜಿತ ಮಹಿಳಾ ಕಾರ್ಯಧ್ಯಕ್ಷೆ ಶೋಭಾ. ವಿ. ಅಂಚನ್, ಗೌರವ ಮಾರ್ಗದರ್ಶಕರು, ಪದಾಧಿಕಾರಿಗಳು, ಸದಸ್ಯರು, ಸದಸ್ಯೆಯರು, ಗ್ರಾಮದ ಹಿರಿಯ ನಾಗರಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷರು ಸಂತೋಷ್ ದೇವಾಡಿಗ ಸ್ವಾಗತಿಸಿದರು. ಸದಸ್ಯೆಯರಾದ ಸುದಿಕ್ಷಾ, ಸಮೀಕ್ಷಾ, ನಿಖಿತಾ ಪ್ರಾರ್ಥಿಸಿದರು. ಕಾರ್ಯದರ್ಶಿ ಜಗದೀಶ್ ಕುಲಾಲ್ ವಂದಿಸಿದರು, ನಿಯೋಜಿತ ಮಹಿಳಾ ಕಾರ್ಯದರ್ಶಿ ನೀಮಾ ಸನಿಲ್ ಆಷಾಡದ ವಿಶಿಷ್ಟ ತಿನಿಸುಗಳ ಪಟ್ಟಿ ಮತ್ತು ತಯಾರಿಸಿದವರ ಹೆಸರು ವಾಚಿಸಿದರು. ಕಾರ್ಯಾಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here